ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐಎಸ್ಐ ಉಪಟಳ ಹೆಚ್ಚಳಕ್ಕೆ ಕೇಂದ್ರ ಹೊಣೆ: ಸಂಗ್ಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಸ್ಐ ಉಪಟಳ ಹೆಚ್ಚಳಕ್ಕೆ ಕೇಂದ್ರ ಹೊಣೆ: ಸಂಗ್ಮಾ
ನೆರೆಯ ಬಾಂಗ್ಲಾದೇಶದಿಂದ ಉಗ್ರಗಾಮಿಗಳು ಈಶಾನ್ಯ ರಾಜ್ಯಗಳಿಗೆ ನುಸುಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಸಿರುವ ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ, ಈ ಭೀತಿಯನ್ನು ತೊಡೆದು ಹಾಕಲು ಕೇಂದ್ರವು ಸಾಕಷ್ಟು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದೆ.

ಐಎಸ್ಐ ಮತ್ತು ಜಿಹಾದಿ ಉಗ್ರರು ಬಾಂಗ್ಲಾದೇಶದಲ್ಲಿ ತಮ್ಮ ಚಟುವಟಿಕೆಯನ್ನು ಹೆಚ್ಚಿಸುತ್ತಿರುವ ಬಗ್ಗೆ ತಮಗೆ ಅರಿವಿದೆ ಆದರೆ ಇದನ್ನು ಮಟ್ಟ ಹಾಕಲು ಕೇಂದ್ರವು ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ಸಂಗ್ಮಾ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಂಗಳವಾರ ಹೇಳಿದ್ದಾರೆ.

ಪಾಕಿಸ್ತಾನದ ಉಗ್ರರೂ ಸಹ ಬಾಂಗ್ಲಾದಲ್ಲಿ ಶಿಬಿರ ಹೂಡುತ್ತಿದ್ದು, ಸರಕಾರ ಇದನ್ನು ತಡೆಯಲು ಪ್ರಯತ್ನಿಸುತ್ತಿಲ್ಲ. ಅಕ್ರಮ ನುಸುಳುವಿಕೆಯನ್ನು ತಡೆಯಲು ಗಡಿಭಾಗದಲ್ಲಿ ತಡೆಬೇಲಿಯು ಭರವಸೆಯ ಸಾಮಾಗ್ರಿಯಲ್ಲ ಎಂದು ಹೇಳಿರುವ ಮಾಜಿ ಲೋಕಸಭಾ ಸ್ಪೀಕರ್, ಈ ವಿಚಾರದಲ್ಲಿ ಉನ್ನತ ಮಟ್ಟದ ಸಂಶೋಧನೆಯಾಗಬೇಕು ಎಂದು ನುಡಿದರು.
ಮತ್ತಷ್ಟು
ನೈನಾದೇವಿ ಕಾಲ್ತುಳಿತ: ಅಧಿಕಾರಿಗಳ ವಿರುದ್ಧ ಕ್ರಮ
ಜಿನೇವಾದಲ್ಲಿ ಬ್ರಹ್ಮಾಂಡದ ಮರು ಸೃಷ್ಟಿ!
ಅ.2ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ
ಮುಂಗಾರು ಅಧಿವೇಶನಕ್ಕೆ ವಿಪಕ್ಷಗಳ ಒತ್ತಾಯ
ಹಾಗಾದರೆ ಅರುಷಿಯನ್ನು ಕೊಂದವರಾರು?
ಪಿಟೀಲು ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ಇನ್ನಿಲ್ಲ