ಜಯಾ ಬಚ್ಚನ್ ಮರಾಠಿ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಜಯಾ ಪರವಾಗಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ, ಜಯಾ ಅಪರಾಧಿಯೆಂದು ಸಾಬೀತಾದಲ್ಲಿ ತಾನು ಮತ್ತು ತನ್ನ ಕುಟುಂಬದ ಸದಸ್ಯರು ಯಾವುದೇ ಶಿಕ್ಷೆ ಸ್ವೀಕರಿಸಲು ಸಿದ್ಧ ಎಂದಿದ್ದಾರೆ.
"ಮರಾಠಿ ವಿರೋಧಿ ಹೇಳಿಕೆಗಳನ್ನು ಜಯಾ ಹೇಳಿದ್ದಾರೆ ಎಂದು ನನಗನಿಸುವುದಿಲ್ಲ. ಈ ವಿಚಾರವನ್ನು ನಾವು ರಾಜ್ಯಕ್ಕೆ ಬಿಟ್ಟುಕೊಡುತ್ತೇವೆ" ಎಂದು ಅಮಿತಾಭ್ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ತನಿಖಾ ವರದಿಗಳಿಗೆ ಕಾಯುತ್ತಿದ್ದು, ಒಂದು ವೇಳೆ ಅಪರಾಧಿಯೆಂದು ಸಾಬೀತಾದಲ್ಲಿ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಕ್ಷಮೆಯಾಚನೆಯ ನಂತರವೂ ಈ ವಿಚಾರವು ಮತ್ತಷ್ಟು ದೃಢವಾಗಿದ್ದು, ಇದು ಕಾನೂನಿಗೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತವೇ ಇದರ ಕುರಿತು ನಿರ್ಧಾರ ಕೈಗೊಳ್ಳಬೇಕು" ಎಂದು ಬಚ್ಚನ್ ಹೇಳಿದ್ದಾರೆ.
ತನಗೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಯಾವುದೇ ವೈಮನಸ್ಸಿಲ್ಲ ಎಂಬುದಾಗಿ ಹೇಳಿರುವ ಬಚ್ಚನ್ ನಾವಿಬ್ಬರೂ ಗೆಳೆಯರು ಎಂದಿದ್ದಾರೆ.
"ಠಾಕ್ರೆ ನನ್ನನ್ನು ಗೌರವಿಸುತ್ತಾರೆ ಪ್ರತಿಯಾಗಿ ನಾನೂ ಅವರನ್ನು ಗೌರವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಜಯಾ ಹೇಳಿರುವ ಹೇಳಿಕೆಯ ಕುರಿತು ತನಿಖೆ ನಡೆಸುವುದಾಗಿ ಸಚಿವ ಆರ್.ಆರ್. ಪಾಟೀಲ್ ತಿಳಿಸಿದ್ದಾರೆ.
|