ಸಂಸತ್ತಿನ ಉಭಯ ಸದನಗಳ ಅಧಿವೇಶನವು ಅಕ್ಟೋಬರ್ 17ರಿಂದ ನವೆಂಬರ್ 21ರ ತನಕ ನಡೆಯಲಿದೆ. ರಾಷ್ಟ್ರಪತಿಯವರು ಅಕ್ಟೋಬರ್ 17ರಂದು ರಾಜ್ಯಸಭಾ ಅಧಿವೇಶನ ಕರೆಯಲು ನಿರ್ದೇಶನ ನೀಡಿರುವುದಾಗಿ ರಾಜ್ಯಸಭಾ ಸಚೇತಕಾಲಯದ ಹೇಳಿಕೆ ತಿಳಿಸಿದೆ.
ಅಧಿವೇಶನವನ್ನು ನವೆಂಬರ್ 21ರಂದು ಕೊನೆಗೊಳಿಸಲು ನಿಗದಿಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಯುಪಿಎ ಸರಕಾರ ವಿಶ್ವಾಸಮತ ಯಾಚನೆಗಾಗಿ ಜುಲೈ 21ರಂದು ವಿಶೇಷ ಅಧಿವೇಶನ ಕರೆಯಲಾಗಿದ್ದ ಲೋಕಸಭಾ ಅಧಿವೇಶನವೂ ಅಕ್ಟೋಬರ್ 17ರಂದು ಆರಂಭವಾಗಲಿದೆ. ಈ ಅಧಿವೇಶನವೂ ನವೆಂಬರ್ 21ರಂದು ಕೊನೆಗೊಳ್ಳಲಿದೆ.
ಈ ವರ್ಷ ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳನ್ನು ವಿಲೀನಗೊಳಿಸಿದ್ದು, ಇದಕ್ಕಾಗಿ ಸರಕಾರವು ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಸಂಸತ್ ಅಧಿವೇಶನ ಕರೆಯುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಇತ್ತೀಚೆಗೆ ವಿರೋಧ ಪಕ್ಷಗಳು ರಾಷ್ಟ್ರಪತಿಯವರನ್ನು ಭೇಟಿಯಾಗಿ ಒತ್ತಾಯಿಸಿದ್ದವು.
|