ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಚ್ಚನ್‌ ಕುಟುಂಬದ ನೆರವಿಗೆ ಸೋನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಚ್ಚನ್‌ ಕುಟುಂಬದ ನೆರವಿಗೆ ಸೋನಿಯಾ
ಜಯಾ ಬಚ್ಚನ್ ಅವರ ಹಿಂದಿ ಮಾತನಾಡುವ ಕುರಿತ ಹೇಳಿಕೆಯ ಹಿನ್ನೆಲೆಯಲ್ಲಿ ಉಂಟಾಗಿರುವ ವಿವಾದದಕ್ಕೆ ಸಂಬಂಧಿಸಿದಂತೆ, ಬಚ್ಚನ್ ಕುಟುಂಬದ ಬೆಂಬಲಕ್ಕೆ ಧಾವಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಚ್ಚನ್ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.

PTI
ಈ ಕುರಿತಂತೆ ವರದಿಯೊಂದನ್ನು ಸಲ್ಲಿಸುವಂತೆಯೂ ಆವರು ಮಹಾರಾಷ್ಟ್ರ ಸರಕಾರಕ್ಕೆ ಹೇಳಿದ್ದಾರೆ. ರಾಜೀವ್ ಗಾಂಧಿಯವರಿಗೆ ಆಪ್ತವಾಗಿದ್ದ ಬಚ್ಚನ್ ಕುಟುಂಬದೊಂದಿಗಿನ ಅಂತರವನ್ನು ಕೊನೆಗೊಳಿಸುವ ಸೂಚನೆಯನ್ನೂ ಸೋನಿಯಾಗಾಂಧಿ ನೀಡಿದ್ದಾರೆ.

ಬಚ್ಚನ್ ಕುಟುಂಬವನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿನ ಪ್ರತಿಭಟನೆಗಳ ಕುರಿತು ಅಸಂತುಷ್ಟವಾಗಿರುವ ಸೋನಿಯಾ, ಮಹಾರಾಷ್ಟ್ರ ನವನಿರ್ಮಾಣ ಸೇನಾವು ಯಾಕಾಗಿ ಅಮಿತಾಭ್ ಬಚ್ಚನ್ ಹಾಗೂ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಲು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವಾರಿಗೆ ಸೂಚನೆ ನೀಡಿದ್ದಾರೆ.

ಬಚ್ಚನ್ ಕುಟುಂಬಕ್ಕೆ ಎಂಎನ್ಎಸ್ ನೀಡುತ್ತಿರುವ ಬೆದರಿಕೆಯು ಬಚ್ಚನ್ ಕುಟುಂಬ ಹಾಗೂ ಅಮಿತಾಭ್ ಬಚ್ಚನ್ ಅವರು ನಟಿಸಿರುವ ದಿ ಲಾಸ್ಟ್ ಲಿಯರ್ ಪ್ರೀಮಿಯರ್ ಪ್ರದರ್ಶನಕ್ಕೂ ತೊಂದರೆಯುಂಟುಮಾಡುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಹೇಳಿದೆ.

ತಾನು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ರಾಜ್ಯದಲ್ಲಿನ ಬೆಳವಣಿಗಗಳನ್ನು ವಿವರಿಸಿರುವುದಾಗಿ ಮಾರ್ಗರೆಟ್ ಆಳ್ವ ಹೇಳಿದ್ದಾರೆ. ಅಲ್ಲದೆ ತಾನು ಈ ಕುರಿತು ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರನ್ನು ಭೇಟಿಯಾಗಿದ್ದು, ಪ್ರಕರಣದ ಕುರಿತಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿಯವರು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆಂದು ಆಳ್ವ ತಿಳಿಸಿದ್ದಾರೆ.
ಮತ್ತಷ್ಟು
ಭಾರತಕ್ಕೆ ಮರಳಿದ ಕೆನ್ ಹೇವುಡ್
ಅ.17ರಿಂದ ಸಂಸತ್ ಅಧಿವೇಶನ
ಜೈಲಿಗೆ ಹೋಗಲು ಸಿದ್ಧ: ಅಮಿತಾಭ್ ಬಚ್ಚನ್
ಪಂಜಾಬಿನ ಮಾಜಿಮುಖ್ಯಮಂತ್ರಿ ಉಚ್ಚಾಟನೆ
ಐಎಸ್ಐ ಉಪಟಳ ಹೆಚ್ಚಳಕ್ಕೆ ಕೇಂದ್ರ ಹೊಣೆ: ಸಂಗ್ಮಾ
ನೈನಾದೇವಿ ಕಾಲ್ತುಳಿತ: ಅಧಿಕಾರಿಗಳ ವಿರುದ್ಧ ಕ್ರಮ