ಮಾನನಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಜಗದೀಶ್ ಟೈಟ್ಲರ್‌ಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಬಹುದಾದ ಬಂಧನದ ವಾರೆಂಟ್ ಅನ್ನು ಗುರುವಾರ ಜಾರಿಗೊಳಿಸಿದೆ.
ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಕೆ.ಬಾನ್ಸಾಲ್ ಅವರು ಜಗದೀಶ್ ಟೈಟ್ಲರ್ ವಿರುದ್ಧ ಈ ಬಂಧನದ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 28ಕ್ಕೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಪ್ರಕರಣವನ್ನು ಪಂಜಾಬ್- ಹರ್ಯಾಣ ಕೋರ್ಟ್‌ನಿಂದ ವರ್ಗಾಯಿಸಬೇಕೆಂದು ಕೋರಿ ಟೈಟ್ಲರ್ ಅವರು ಸೆಪ್ಟೆಂಬರ್ 8ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು, ಟೈಟ್ಲರ್ ಮೇಲಿನ ಆರೋಪ ಮತ್ತು ಮುಕ್ತ ವಿಚಾರಣೆ, ರಕ್ಷಣೆ ಕುರಿತಾಗಿ ವಿವರಣೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.
2004ರಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ಟೈಟ್ಲರ್ ಅವರು ನೀಡಿದ ಸಂದರ್ಶನದಲ್ಲಿ ಮಾನಹಾನಿಕರ ಹೇಳಿಕೆ ನೀಡಿದ ಕುರಿತು ದೆಹಲಿ ಮೂಲಕ ಹಿರಿಯ ವಕೀಲರಾದ ಎಚ್.ಎಸ್.ಫೂಲ್ಕಾ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
|