ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೋದಿ ವಿರುದ್ಧ ಹೊಸ ಪಕ್ಷ ಅಸ್ತಿತ್ವಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ವಿರುದ್ಧ ಹೊಸ ಪಕ್ಷ ಅಸ್ತಿತ್ವಕ್ಕೆ
ದೇಶಾದ್ಯಂತ ಬಹಳಷ್ಟು ಟೀಕೆ ಹಾಗೂ ಪ್ರಶಂಸೆಗೆ ಒಳಗಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಇದೀಗ ಆಡಳಿತರೂಢ ಪಕ್ಷದ ಬಂಡುಕೋರರು ನೂತನ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ.

ಮಹಾಗುಜರಾತ್ ಜನತಾಪಕ್ಷ(ಎಂಜೆಪಿ)ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ಪಕ್ಷದ ಅಧ್ಯಕ್ಷಗಾದಿಯನ್ನು ಮಾಜಿ ಗೃಹ ಸಚಿವ ಗೋವರ್ಧನ್ ಜಡಾಫಿಯಾ ಅವರು ವಹಿಸಿದ್ದಾರೆ.

ಗುರುವಾರ ತಮ್ಮ ಪಕ್ಷದ ಚಿಹ್ನೆ ಹಾಗೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪಕ್ಷವು ಮಾನವೀಯತೆಯನ್ನು ಐಕ್ಯತೆಯೇ ಪ್ರಸ್ತುತ ಪಕ್ಷದ ತಿರುಳು ಎಂದು ಎಂಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಸುನೀಲ್ ಓಜಾ ತಿಳಿಸಿದ್ದಾರೆ.

ಪಕ್ಷದ ಚಿಹ್ನೆ ಶಂಖವಾಗಿದ್ದು, ಬಂಗಾರದ ಬಣ್ಣವನ್ನು ಹೊಂದಿದ್ದು, ಇದು ತ್ಯಾಗದ ಸಂಕೇತವನ್ನು ಸೂಚಿಸುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮತ್ತಷ್ಟು
ಕಾಂಗ್ರೆಸ್ ಮುಖಂಡ ಟೈಟ್ಲರ್ ವಿರುದ್ಧ ವಾರೆಂಟ್
ಉಪಹಾರ್: ಅನ್ಸಾಲ್ ಸಹೋದರರು ಶರಣು
ರಾಷ್ಟ್ರಪತಿಗಳಿಗೆ ಶೇ.300ರಷ್ಟು ಹೈಕ್!
ಬಚ್ಚನ್ ವಿರುದ್ಧ ರಾಜ್ 'ಕದನ ವಿರಾಮ'
'ಸಿಮಿ' ನಿಷೇಧ ಮತ್ತೆ ವಿಸ್ತರಣೆ: ಸುಪ್ರೀಂಕೋರ್ಟ್
ಬಚ್ಚನ್‌ ಕುಟುಂಬದ ನೆರವಿಗೆ ಸೋನಿಯಾ