ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಿಯುಸಿಒಸಿ: ಪತ್ರಚಳುವಳಿಗೆ ಮೋದಿ ವಿನಂತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಯುಸಿಒಸಿ: ಪತ್ರಚಳುವಳಿಗೆ ಮೋದಿ ವಿನಂತಿ
PTI
ಜನರ ಭಾವನೆಗಳನ್ನು ಎನ್‌ಕ್ಯಾಶ್ ಮಾಡಲು ಹೊರಟಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಗುಜರಾತ್ ಭಯೋತ್ಪಾದನಾ ಕಾಯ್ದೆ ಜಾರಿಯ ಕುರಿತಂತೆ ಕೇಂದ್ರದೊಂದಿಗೆ ಮತ್ತೊಮ್ಮೆ ಗುದ್ದಾಟಕ್ಕೆ ಮುಂದಾಗಿದ್ದಾರೆ.

ಗುಜರಾತ್ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ (ಜಿಯುಸಿಒಸಿ) ಗುಜರಾತ್ ಶಾಸನ ಸಭೆಯಲ್ಲಿ ಎರಡು ಬಾರಿ ಅಂಗೀಕರಿಸ್ಪಟ್ಟರೂ, ಇದಕ್ಕೆ ಇನ್ನೂ ಕೇಂದ್ರದ ಒಪ್ಪಿಗೆ ಲಭಿಸಿಲ್ಲ.

ಗುಜರಾತ್ ಹೈಕೋರ್ಟಿಗೆ ಸಲ್ಲಿಸಲಾಗಿರುವ ಮನವಿಯೊಂದಕ್ಕೆ ಸಂಬಂಧಿಸಿದಂತೆ ಉತ್ತರಿಸಿರುವ ಕೇಂದ್ರ ಗೃಹ ಸಚಿವಾಲಯವು ಈ ಶಾಸನವು ರದ್ದತಿಯಾಗಿರುವ ಫೋಟಾವನ್ನು ಹೋಲುವ ಕಾರಣ ಇದಕ್ಕೆ ಅಂಗೀಕಾರ ನೀಡುವಂತಿಲ್ಲ ಎಂದು ಹೇಳಿದೆ.

ಆದರೆ, ಇದರಿಂದ ಎದೆಗುಂದದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಹೊರಟಿದ್ದಾರೆ.

ವಿಶ್ವಾದ್ಯಂತ ಇರುವ ಗುಜರಾತಿ ಸಮುದಾಯವು ಈ ಶಾಸನವನ್ನು ಅಂಗೀಕರಿಸುವಂತೆ ಕೋರಿ ಪ್ರಧಾನಿಯವರಿಗೆ ಇ-ಮೇಲ್ ಕಳುಹಿಸಿ ಎಂದು ಮನವಿ ಮಾಡಿದ್ದಾರೆ. "ಪ್ರಜಾಪ್ರಭುತ್ವದಲ್ಲಿ ಇದೊಂದು ಉತ್ತಮ ಹಾದಿ" ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಿಯುಸಿಒಸಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಪ್ರಧಾನಿಯವರಿಗೆ ಪೋಸ್ಟ್ ಕಾರ್ಡ್‌ಗಳನ್ನು ಬರೆಯುವಂತೆ ಅವರು ಗ್ರಾಮೀಣ ಜನತೆಯನ್ನೂ ವಿನಂತಿಸಿದ್ದಾರೆ.

ಗುಜರಾತಿ, ಹಿಂದಿ ಅಥವಾ ಇಂಗ್ಲೀಷ್ ಯಾವ ಭಾಷೆ ನಿಮಗೆ ತಿಳಿದಿದೆಯೇ ಆ ಭಾಷೆಯಲ್ಲಿ ಪತ್ರ ಬರೆದು ಕಾಯ್ದೆಯ ಜಾರಿಗೆ ಚಳುವಳಿ ಹೂಡಿ ಎಂದು ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

"ಅಂತಹ ಶಾಸನಗಳು, ಆಂಧ್ರ, ಕರ್ನಾಟಕ ಹಾಗೂ ಇತರ ಎಂಟು ರಾಜ್ಯಗಳಲ್ಲಿ ಇದೆ. ಹೀಗಿರುವಾಗ ಗುಜರಾತಿನಲ್ಲಿ ಯಾಕೆ ಸಾಧ್ಯವಿಲ್ಲ? ಇದು ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿದೆ. ಸಮಾನತೆಯು ಜನತೆಗೆ ಮಾತ್ರವಲ್ಲ ರಾಜ್ಯಗಳಿಗೂ ಸಹ ಅನ್ವಯಿಸುತ್ತದೆ" ಎಂದು ವಿಚಾರಣಾ ನ್ಯಾಯದ ಅಧ್ಯಕ್ಷ ಎಸ್.ಎಂ.ಸೋನಿ ಹೇಳಿದ್ದಾರೆ.

ಜಿಯುಸಿಒಸಿ ಕಾಯ್ದೆಯು ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ವಿರುದ್ಧದ ಅತ್ಯಂತ ಕಠಿಣ ಕ್ರಮಕ್ಕೆ ಆಸ್ಪದ ನೀಡುತ್ತದೆ.
ಮತ್ತಷ್ಟು
ಮೋದಿ ವಿರುದ್ಧ ಹೊಸ ಪಕ್ಷ ಅಸ್ತಿತ್ವಕ್ಕೆ
ಕಾಂಗ್ರೆಸ್ ಮುಖಂಡ ಟೈಟ್ಲರ್ ವಿರುದ್ಧ ವಾರೆಂಟ್
ಉಪಹಾರ್: ಅನ್ಸಾಲ್ ಸಹೋದರರು ಶರಣು
ರಾಷ್ಟ್ರಪತಿಗಳಿಗೆ ಶೇ.300ರಷ್ಟು ಹೈಕ್!
ಬಚ್ಚನ್ ವಿರುದ್ಧ ರಾಜ್ 'ಕದನ ವಿರಾಮ'
'ಸಿಮಿ' ನಿಷೇಧ ಮತ್ತೆ ವಿಸ್ತರಣೆ: ಸುಪ್ರೀಂಕೋರ್ಟ್