ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇನ್ನೊಂದು ಬಿಎಂಡಬ್ಲ್ಯು ಅಪಘಾತ: ಇಬ್ಬರ ಸ್ಥಿತಿ ಗಂಭೀರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಂದು ಬಿಎಂಡಬ್ಲ್ಯು ಅಪಘಾತ: ಇಬ್ಬರ ಸ್ಥಿತಿ ಗಂಭೀರ
ದೆಹಲಿಯಲ್ಲಿ ಗುರುವಾರ ಸಂಭವಿಸಿರುವ ಇನ್ನೊಂದು ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಶುಕ್ರವಾರ ಉತ್ಸವ್ ಭಾಸಿನ್ ಎಂಬಾತನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ನಿರ್ಲಕ್ಷಿತ ಚಾಲನೆ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಕಾಶ್ಮೀರ ಗೇಟ್ ಬಳಿ ಭಾಸಿನ್‌ನನ್ನು ಬಂಧಿಸಲಾಗಿದ್ದು, ಈತನನ್ನು ಪರೀಕ್ಷೆಗಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದೊಯ್ಯಲಾಗಿದೆ.

ಲಜ್‌ಪತ್ ನಗರ ಪ್ರದೇಶದಲ್ಲಿ ಅಂಜು ಆದಿತ್ಯ ಹಾಗೂ ಆತನ ಸ್ನೇಹಿತ ಮರಿಕಾಂತ್ ಠಾಕೂರ್ ಎಂಬಿಬ್ಬರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬಿಎಂಡಬ್ಲ್ಯು ಕಾರು ಬಡಿದಿದ್ದು, ಈ ಇಬ್ಬರು ಗಾಯಗೊಂಡಿದ್ದಾರೆ. ಇವರಲ್ಲಿ 25ರ ಹರೆಯದ ಆದಿತ್ಯನ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

ಅಪಘಾತದ ಬಳಿಕ ಭಯಗೊಂಡ ಭಾಸಿನ್ ಕಾರಿನ ಕಿಟಿಕಿಯನ್ನು ಒಡೆದು ಪರಾರಿಯಾಗಿದ್ದ. ಅಪಘಾತದ ವೇಳೆ ಕಾರು ಸ್ವಯಂ ಲಾಕ್ ಆಗಿದ್ದು, ಬಾಗಿಲು ತೆರೆಯಲು ಆಗದ ಕಾರಣ ಆತ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ಪೊಲೀಸ್ ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹರ್ಯಾಣದ ವಿಐಪಿ ನಂಬರ್‌ಪ್ಲೇಟ್ ಹೊಂದಿರುವ ಈ ಕಾರನ್ನು ದುಷ್ಕರ್ಮಿಗಳು ಅಪಘಾತದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.

20ರ ಹರೆಯದ ಭಾಸಿನ್ ಪಂಜಾಬಿ ಭಾಗ್ ನಿವಾಸಿಯಾಗಿದ್ದು, ದೆಹಲಿಯ ಪ್ರಮುಖ ಶಾಲೆಯೊಂದರ ಹಳೆ ವಿದ್ಯಾರ್ಥಿಯಾಗಿದ್ದಾನೆ. ಈತನ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯೂ ಅದೇ ಶಾಲೆಯಲ್ಲಿ ಹನ್ನೆರಡನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದಾಳೆ.

ಅಪಘಾತಕ್ಕೀಡಾಗಿರುವ ಇನ್ನೋರ್ವ ಯುವಕ ತನ್ನ ಸ್ಮರಣ ಶಕ್ತಿ ಕಳೆದುಕೊಂಡಿದ್ದು, ಅಪಘಾತದ ಕುರಿತು ಯಾವುದೇ ನೆನಪನ್ನು ಹೊಂದಿಲ್ಲ.
ಮತ್ತಷ್ಟು
ಜಮ್ಮು: ಎನ್‌‌ಕೌಂಟರ್‌ಗೆ 3 'ಹುಜಿ' ಉಗ್ರರ ಬಲಿ
ಜಿಯುಸಿಒಸಿ: ಪತ್ರಚಳುವಳಿಗೆ ಮೋದಿ ವಿನಂತಿ
ಮೋದಿ ವಿರುದ್ಧ ಹೊಸ ಪಕ್ಷ ಅಸ್ತಿತ್ವಕ್ಕೆ
ಕಾಂಗ್ರೆಸ್ ಮುಖಂಡ ಟೈಟ್ಲರ್ ವಿರುದ್ಧ ವಾರೆಂಟ್
ಉಪಹಾರ್: ಅನ್ಸಾಲ್ ಸಹೋದರರು ಶರಣು
ರಾಷ್ಟ್ರಪತಿಗಳಿಗೆ ಶೇ.300ರಷ್ಟು ಹೈಕ್!