ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಿಎಫ್ ಹಗರಣ ಸಿಬಿಐ ತನಿಖೆಗೆ ಯುಪಿ ಶಿಫಾರಸ್ಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಎಫ್ ಹಗರಣ ಸಿಬಿಐ ತನಿಖೆಗೆ ಯುಪಿ ಶಿಫಾರಸ್ಸು
ಗಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ರೂಪಾಯಿ ಮೊತ್ತದ ಭವಿಷ್ಯನಿಧಿ ಹಗರಣವನ್ನು ಸಿಬಿಐಗೆ ಒಪ್ಪಿಸಲು ಉತ್ತರಪ್ರದೇಶ ಸರಕಾರ ಶಿಫಾರಸ್ಸು ಮಾಡಿದೆ. ಈ ಔಪಚಾರಿಕ ಶಿಫಾರಸ್ಸನ್ನು ಬುಧವಾರ ರಾತ್ರಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಕಲಿ ಫಾರ್ಮ್ ಬಳಸಿ ಭವಿಷ್ಯ ನಿಧಿ ಹಣವನ್ನು ಪಡೆದುಕೊಂಡಿದ್ದಾರೆಂಬ ಆರೋಪದಲ್ಲಿ ಪೊಲೀಸರು 67 ಮಂದಿ ನ್ಯಾಯಾಲಯದ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ದೆಹಲಿ ಹಾಗೂ ಅಲಹಬಾದ್ ಹೈಕೋರ್ಟ್‌ಗಳ ಹಿರಿಯ ನ್ಯಾಯಾಂಗ ಅಧಿಕಾರಿಗಳ ಹೆಸರೂ ಈ ಪ್ರಕರಣದಲ್ಲಿ ಕೇಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದ ಗಜಿಯಾಬಾದ್ ವಕೀಲರ ಸಂಘವು ಅಲಹಬಾದ್ ಹೈ ಕೋರ್ಟ್, ತದನಂತರ ಸುಪ್ರೀಂ ಕೋರ್ಟ್ ಸಂಪರ್ಕಿಸಲಾಗಿತ್ತು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಯಾಕೆ ಒಪ್ಪಿಸಬಾರದು ಎಂಬ ಕುರಿತು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು.

ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಿದ ಕೂಡಲೇ, ರಾಜ್ಯ ಸರಕಾರವು ಈ ಶಿಫಾರಸ್ಸು ಮಾಡಿದ್ದರೂ ಇದನ್ನು ಗೃಹ ಇಲಾಖಾ ಅಧಿಕಾರಿಗಳು ಬಹಿರಂಗ ಪಡಿಸಿರಲಿಲ್ಲ. ಮುಖ್ಯಮಂತ್ರಿ ಮಾಯಾವತಿ ಅವರ ನಿರ್ದೇಶನದಂತೆ ಗೃಹ ಕಾರ್ಯದರ್ಶಿ ಮುಖೇಶ್ ಕುಮಾರ್ ಅವರು ಸಿಬಿಐ ತನಿಖೆಗಾಗಿ ಶಿಫಾರಸ್ಸು ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ.

2002ರಿಂದ 2007ರ ಅವಧಿಯಲ್ಲಿ ನಡೆದಿರುವ ಈ ಪ್ರಕರಣದಲ್ಲಿ 23 ಕೋಟಿ ರೂಪಾಯಿ ಮೊತ್ತದ ಅವ್ಯಹಾರ ನಡೆದಿದೆ. ಗಜಿಯಾಬಾದ್ ನ್ಯಾಯಾಲಯಗಳ ನಾಲ್ಕನೆ ದರ್ಜೆ ನೌಕರರ ಭವಿಷ್ಯ ನಿಧಿ ಹಣವನ್ನು ಕೇಂದ್ರೀಯ ನಾಝಿರ್ ಮತ್ತು ಖಜಾನೆ ಅಧಿಕಾರಿಯು ಸಂಬಂಧಿತ ನ್ಯಾಯಾಧೀಶರ ಅಂಗೀಕಾರದೊಂದಿಗೆ ನಕಲಿ ಫಾರ್ಮ್‌ಗಳನ್ನು ಬಳಸಿ ಪಡೆಯಲಾಗಿದೆ.
ಮತ್ತಷ್ಟು
ಬಿಹಾರ ನೆರೆ ಪರಿಹಾರಕ್ಕೆ 'ಗಣಪತಿ' ಸಹಾಯ ಹಸ್ತ
ಅರುಷಿ ಪ್ರಕರಣ: ರಾಜ್‌ಕುಮಾರ್, ಕೃಷ್ಣಗೆ ಜಾಮೀನು
ಇನ್ನೊಂದು ಬಿಎಂಡಬ್ಲ್ಯು ಅಪಘಾತ: ಇಬ್ಬರ ಸ್ಥಿತಿ ಗಂಭೀರ
ಜಮ್ಮು: ಎನ್‌‌ಕೌಂಟರ್‌ಗೆ 3 'ಹುಜಿ' ಉಗ್ರರ ಬಲಿ
ಜಿಯುಸಿಒಸಿ: ಪತ್ರಚಳುವಳಿಗೆ ಮೋದಿ ವಿನಂತಿ
ಮೋದಿ ವಿರುದ್ಧ ಹೊಸ ಪಕ್ಷ ಅಸ್ತಿತ್ವಕ್ಕೆ