ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋಲಾಪುರ್: ಶಂಕಿತ ಸಿಮಿ ಉಗ್ರನ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲಾಪುರ್: ಶಂಕಿತ ಸಿಮಿ ಉಗ್ರನ ಸೆರೆ
ಶಂಕಿತ ಸಿಮಿ ಉಗ್ರನೊಬ್ಬನನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ ಶುಕ್ರವಾರ ಸೆ.18ರವರೆಗೆ ಪೊಲೀಸ್ ಬಂಧನಕ್ಕೆ ಒಪ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಸಿಮಿ ಉಗ್ರನನ್ನು ಬಿಹಾರ ದರ್ಬಾಂಗ್‌‌ನ ಪೈಜುಲ್ಲಾ ಮೊಹಮ್ಮದ್ ಕರೀಮ್ ಶೇಕ್ (30) ಎಂದು ಗುರುತಿಸಲಾಗಿದ್ದು, ಆತನನ್ನು ಗುರುವಾರ ಸೆರೆ ಹಿಡಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೇ ಬಂಧಿತ ಪೈಜುಲ್ಲಾನಿಂದ 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪತ್ರಿಕೆಯ ಪೇಪರ್ ಕಟ್ಟಿಂಗ್‌ಗಳು ಮತ್ತು ಉರ್ದು ಭಾಷೆಯ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಶೇಕ್ ಕೋಲಾಪುರ್ ಮತ್ತು ಗೋವಾದ ವಿವಿಧ ಸ್ಥಳಗಳಲ್ಲಿ ವಾಸವಾಗಿರುವುದಾಗಿ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಶಾಹಾಜಿ ಉಮಾಪ್ ಅವರು ಹೇಳಿದರು.

ಈ ಮೊದಲು 2008ರ ಮೇ ತಿಂಗಳಿನಲ್ಲಿ ಶೇಕ್‌ನನ್ನು ಚಾಂದ್‌ಗಡ್ ಡಾಮ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಸಹಿತ ಬಂಧಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಮತ್ತಷ್ಟು
ಶ್ರೀನಗರದಲ್ಲಿ ಮತ್ತೆ ಘರ್ಷಣೆ - ಓರ್ವ ಬಲಿ
ಪಿಎಫ್ ಹಗರಣ ಸಿಬಿಐ ತನಿಖೆಗೆ ಯುಪಿ ಶಿಫಾರಸ್ಸು
ಬಿಹಾರ ನೆರೆ ಪರಿಹಾರಕ್ಕೆ 'ಗಣಪತಿ' ಸಹಾಯ ಹಸ್ತ
ಅರುಷಿ ಪ್ರಕರಣ: ರಾಜ್‌ಕುಮಾರ್, ಕೃಷ್ಣಗೆ ಜಾಮೀನು
ಇನ್ನೊಂದು ಬಿಎಂಡಬ್ಲ್ಯು ಅಪಘಾತ: ಇಬ್ಬರ ಸ್ಥಿತಿ ಗಂಭೀರ
ಜಮ್ಮು: ಎನ್‌‌ಕೌಂಟರ್‌ಗೆ 3 'ಹುಜಿ' ಉಗ್ರರ ಬಲಿ