ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರು: ಬುದ್ಧ-ಮಮತಾ ಮಾತುಕತೆ ವಿಫಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರು: ಬುದ್ಧ-ಮಮತಾ ಮಾತುಕತೆ ವಿಫಲ
ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನಡುವಿನ ಮಾತುಕತೆ ವಿಫಲವಾಗುವುದರೊಂದಿಗೆ ಸಿಂಗೂರು ವಿವಾದಕ್ಕೆ ತೆರೆಕಾಣಲಿದೆ ಎಂಬ ಆಸೆ ಕಮರಿದೆ.

ಟಾಟಾವು ನ್ಯಾನೋ ಬಿಡುಗಡೆಗೆ ನಿಗದಿ ಮಾಡಿರುವ ದಿನ ಸಮೀಪಿಸುತ್ತಿದೆ. ಏತನ್ಮಧ್ಯೆ ಪೂನಾ ಸ್ಥಾವರದಿಂದ ಮೊದಲ 1000 ನ್ಯಾನೋ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಟಾಟಾ ಸಂಸ್ಥೆ ಶುಕ್ರವಾರ ಘೋಷಿಸಿದೆ.

ಐದು ದಿನಗಳೊಳಗಾಗಿ ಮಮತಾ ಹಾಗೂ ಬುದ್ಧದೇವ್ ನಡುವೆ ನಡೆಯುತ್ತಿರುವ ಎರಡನೆ ಮಾತುಕತೆ ಇದಾಗಿದ್ದು, ಇಬ್ಬರು ನಾಯಕರು ಒಮ್ಮತಕ್ಕೆ ಬರುವಲ್ಲಿ ವಿಫಲಾಗಿದ್ದಾರೆ.

ಸಿಂಗೂರು ಯೋಜನಾ ಪ್ರದೇಶದಿಂದ ತಾನು 300 ಎಕರೆ ಪ್ರದೇಶಕ್ಕೆ ಬೇಡಿಕೆ ಇಟ್ಟಿದ್ದರೂ, ಇದಕ್ಕೆ ಬದಲಾಗಿ ಸರಕಾರ ಬರಿಯ 70 ಎಕರೆ ಜಾಗವನ್ನಷ್ಟೆ ನೀಡುವುದಾಗಿ ಹೇಳಿದೆ ಎಂದ ಮಮತಾ ಸಭೆಯ ಬಳಿಕ ತಿಳಿಸಿದರು.

ಚಳುವಳಿ ಹಿಂತೆಗೆಯುವ ಮೂಲಕ ತೃಣಮೂಲ ಕಾಂಗ್ರೆಸ್ ತನ್ನ ಮಾತನ್ನು ಉಳಿಸಿದೆ. ಅಂತೆಯೇ ಸರಕಾರವೂ ತನ್ನ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮಮತಾ ಹೇಳಿದ್ದಾರೆ.
ಮತ್ತಷ್ಟು
ನಕ್ಸಲ್ ಪೀಡಿತ ಪ್ರದೇಶಕ್ಕೆ 500 ಕೋಟಿ: ಪಾಟೀಲ್
ಸಿಂಗೂರ್ ವಿವಾದ ಇತ್ಯರ್ಥಕ್ಕೆ ಬುದ್ದ-ಮಮತಾ ಮಾತುಕತೆ
ಕೋಲಾಪುರ್: ಶಂಕಿತ ಸಿಮಿ ಉಗ್ರನ ಸೆರೆ
ಶ್ರೀನಗರದಲ್ಲಿ ಮತ್ತೆ ಘರ್ಷಣೆ - ಓರ್ವ ಬಲಿ
ಪಿಎಫ್ ಹಗರಣ ಸಿಬಿಐ ತನಿಖೆಗೆ ಯುಪಿ ಶಿಫಾರಸ್ಸು
ಬಿಹಾರ ನೆರೆ ಪರಿಹಾರಕ್ಕೆ 'ಗಣಪತಿ' ಸಹಾಯ ಹಸ್ತ