ಬ್ರಹ್ಮಾಂಡದ ರಹಸ್ಯ ಅರಿಯುವ ಮಹಾತ್ವಾಕಾಂಕ್ಷೆಯಲ್ಲಿ ಅದರ ಮರುಸೃಷ್ಟಿಯ ಕಲ್ಪನೆಯ ಹಿನ್ನೆಲೆಯ ಮಹಾಸ್ಫೋಟ ಪ್ರಯೋಗವು, ಭಾರತೀಯ ವಿಜ್ಞಾನಿಗಳನ್ನು ಜಾಗತಿಕ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ.
ಬಿಗ್ ಬ್ಯಾಂಗ್ ಅಥವಾ ಮಹಾಸ್ಫೋಟದ ದೈತ್ಯ ಡಿಕ್ಕಿಕಾರ(ಎಲ್ಎಚ್‌ಸಿ)ವನ್ನು ಕ್ರಿಯಾಶೀಲಗೊಳಿಸಲು ಅಗತ್ಯವಿರುವ ಘಟಕಗಳನ್ನು ಆರಂಭಿಕ ವಿಜ್ಞಾನಿಗಳು ಮಂಜೂರಿಯಾಗಿರುವ ಮೊತ್ತಕ್ಕಿಂತ ಅತಿ ಕಡಿಮೆ ವೆಚ್ಚದಲ್ಲಿ ಒಟ್ಟುಮಾಡಿದ್ದಾರೆ. ಈ ಪ್ರಯೋಗವನ್ನು ಕಂಡ ಯುರೋಪ್‌ನ ಅಣುಸಂಶೋಧನಾ ಕೇಂದ್ರವು ಅಚ್ಚರಿಯ ದೃಷ್ಟಿಯನ್ನು ಬೀರಿದೆ. ಈ ಮಿಕ್ಕ ಹಣವನ್ನು ಅದು ಭಾರತೀಯ ವಿಜ್ಞಾನಿಗಳು ಪ್ರಯೋಗದ ಸ್ಥಳಕ್ಕೆ ಭೇಟಿನೀಡುವಂತೆ ಮಾಡಲು ಮೀಸಲಿರಿಸಿದೆ.
ಭಾರತೀಯ ವಿಜ್ಞಾನಿಗಳ ಕೆಚ್ಚು ಮತ್ತು ಸಾಹಸವು ಯುರೋಪಿನ ಪರಮಾಣು ಸಂಖೋಧನಾ ಸಂಸ್ಥೆ(ಸಿಇಆರ್ಎನ್)ಯು ಭಾರತಕ್ಕೆ ವೀಕ್ಷಕ ಸ್ಥಾನವನ್ನು ನೀಡುವಂತೆ ಮಾಡಿದೆ. ಚೀನ ದೇಶಕ್ಕೆ ಇದುವರೆಗೆ ಇಂತಹ ಸ್ಥಾನಮಾನ ಲಭಿಸಿಲ್ಲ.
ಭಾರತೀಯ ವಿಜ್ಞಾನಿಗಳು ಸಿಇಆರ್ಎನ್ ಜತೆಗೆ ದೈತ್ಯ ಡಿಕ್ಕಿಕಾರ ಪ್ರಯೋಗಗಳಿಗಾಗಿ 1991ರಿಂದಲೇ ಸಹಕರಿಸುತ್ತಿದ್ದಾರೆ. ಈ ಪ್ರಯೋಗದ ಸಂಪೂರ್ಣ ಯಂತ್ರವು (ಡಿಕ್ಕಿಕಾರ) ನಿಲ್ಲುವ ಎಲ್ಲಾ ಜಾಕ್‌ಗಳನ್ನು ಭಾರತದಲ್ಲಿ ನಿರ್ಮಿಸಲಾಗಿದೆ.
ಈ ಜಾಕ್‌ಗಳು ದೈತ್ಯಡಿಕ್ಕಿಕಾರದ ಅತ್ಯಂತ ಮೂಲ ಅವಶ್ಯಕತೆಯಾಗಿದ್ದು, ಈ ಪ್ರಯೋಗಗಳು, ಇದೀಗಾಗಲೇ ಅಣುಭೌತಶಾಸ್ತ್ರದಲ್ಲಿ ಅತ್ಯುತ್ತಮ ಭಾಗವೆಂದು ಸಾಬೀತಾಗಿರುವ ಭಾರತೀಯ ವೈಜ್ಞಾನಿಕ ಸಮುದಾಯದ ಸಾವರ್ಥ್ಯವನ್ನು ಜಗಜ್ಜಾಹಿರು ಮಾಡಿದೆ ಎಂದು ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರದ ನಿರ್ದೇಶಕ ಅಮಿತ್ ರಾಯ್ ಹೇಳಿದ್ದಾರೆ.
ಈ ಮಹಾಪ್ರಯೋಗಕ್ಕೆ ಭಾರತವು 100 ವಿಜ್ಞಾನಿಗಳ ಶ್ರಮವನ್ನು ನೀಡುವುದರೊಂದಿಗೆ ಈ ಯೋಜನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯು ರಾಷ್ಟ್ರವನ್ನು ಬೃಹತ್ ಲೀಗ್‌ಗೆ ಸರಿಗಟ್ಟಿಸಿದೆ. ಯಂತ್ರಗಳ ಅಭಿವೃದ್ಧಿಯು ಭಾರತೀಯ ವಿಜ್ಞಾನಿಗಳಿಗೆ ಅತ್ಯುನ್ನತ ಮಟ್ಟದ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಿದ್ದು, ಭಾರತದ ಸಾಮರ್ಥ್ಯದ ಮೌಲ್ಯಮಾಪನ ಮಾಡಿದಂತಾಗಿದೆ.
|