ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನುಡುವಿನ ಹಿಂಸಾಚರಾದ ಘರ್ಷಣೆಯು ಎರಡನೆ ದಿವವಾದ ಶನಿವಾರವೂ ಮೈಸುಮ ಪ್ರದೇಶದಲ್ಲಿ ಮುಂದುವರಿದಿದೆ.
ಮೈಸುಮ ಪ್ರದೇಶದಿಂದ ನಗರದಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಇವರನ್ನು ತಡೆಯಲು ಭದ್ರತಾ ಪಡೆಗಳು ಯತ್ನಸಿದಾಗ ಘರ್ಷಣೆಯುಂಟಾಗಿದ್ದು ಕಲ್ಲು ತೂರಾಟ ನಡೆಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.
ಘರ್ಷಣೆಯಿಂದ ಹಾನಿಯುಂಟಾದ ಬಗ್ಗೆ ಯಾವುದೇ ವರದಿ ಇಲ್ಲವಾದರೂ, ಅರೆ ಸೇನಾಪಡೆಗಳು ಹಲವು ಪ್ರತಿಭಟನಾಕಾರರಿಗೆ ಥಳಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಮೂಲಗಳು ಹೇಳಿವೆ.
|