ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗರ್ಭಪಾತ ಅವಧಿ 24 ವಾರಗಳಿಗೇರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರ್ಭಪಾತ ಅವಧಿ 24 ವಾರಗಳಿಗೇರಿಕೆ
ಇಪ್ಪತ್ತನಾಲ್ಕು ವಾರಗಳ ಅವಧಿಯ ತನಕದ ಭ್ರೂಣದ ಗರ್ಭಪಾತವನ್ನು ನ್ಯಾಯಯುತಗೊಳಿಸಲು ಸರಕಾರ ಆಲೋಚಿಸುತ್ತಿದೆ. ಇದು ವರೆಗೆ 20 ವಾರಗಳ ತನಕದ ಭ್ರೂಣದ ಗರ್ಭಪಾತಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶ ಇತ್ತು. ಇದರೊಂದಿಗೆ ಬಾಡಿಗೆ ತಾಯ್ತನವನ್ನೂ ನ್ಯಾಯಯುತಗೊಳಿಸಲು ಸರ್ಕಾರ ಚಿಂತಿಸುತ್ತಿದೆ.

ಗರ್ಭಪಾತ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ಇತ್ತೀಚೆಗೆ ಹೇಳಿದ್ದ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ತನ್ನ ಹೇಳಿಕೆಯನ್ನು ಮರುಪರಿಶೀಲಿಸುವುದಾಗಿ ಹೇಳಿದ್ದಾರೆ.

ಕಾನೂನು ರೀತ್ಯಾ ಗರ್ಭಪಾತದ ಅವಧಿಯನ್ನು 20ರಿಂದ 24ವಾರಗಳಿಗೆ ಏರಿಸುವಂತೆ ಕಾನೂನಿನಲ್ಲಿ ಬದಲಾವಣೆ ಮಾಡುವ ಕುರಿತು ದೂರದರ್ಶನ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಮದಾಸ್ ಹೇಳಿದ್ದಾರೆ.

ಗರ್ಭದೊಳಗಿರುವ ಮಗುವು ಏನಾದರೂ ವಾಸಿಯಾಗದಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಅಥವಾ ತಾಯಿಯ ಜೀವಕ್ಕೆ ಅಪಾಯ ಇದೆ ಎಂದಾದರೆ, 24 ವಾರಗಳ ಪ್ರಾಯದ ಭ್ರೂಣದ ಗರ್ಭಪಾತ ಮಾಡಿಸಬಹುದು ಎಂದು ಅವರು ಹೇಳಿದ್ದಾರೆ.

ನಿಕಿತಾ ಮೆಹ್ತಾ ಎಂಬ ಮಂಬೈ ಮೂಲದ ಮಹಿಳೆ, ತನ್ನ ಗರ್ಭದಲ್ಲಿದ್ದ ಭ್ರೂಣವು ಹೃದಯದ ಸಮಸ್ಯೆಯನ್ನು ಹೊಂದಿದೆ ಎಂಬುದು ತಿಳಿದು ಬಂದ ಬಳಿಕ, ಗರ್ಭ ಕಳೆಯಲು ನ್ಯಾಯಾಲಯದ ಅನುಮತಿ ಕೋರಿದ್ದು, ಭ್ರೂಣವು 20 ವಾರಗಳ ಅವಧಿ ಮೀರಿದ ಕಾರಣ ನ್ಯಾಯಾಲಯ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಭಾರತೀಯ ಗರ್ಭಪಾತ ಕಾನೂನು ತೀವ್ರ ಚರ್ಚೆಗೆ ಆಸ್ಪದವಾಗಿತ್ತು.

ಅಂತೆಯೆ ಬಾಡಿಗೆ ತಾಯ್ತನದ ಕುರಿತು ಇತರ ರಾಷ್ಟ್ರಗಳಲ್ಲಿರುವ ಕಾನೂನುಗಳ ಪರೀಕ್ಷೆಗಾಗಿ ಸಮಿತಿಯನ್ನು ರೂಪಿಸಲಾಗಿದೆ ಎಂದು ಹೇಳಿದ ಸಚಿವರು, ಈ ಕುರಿತು ಕಾನೂನು ರೂಪಿಸುವುದಾಗಿ ತಿಳಿಸಿದರು.
ಮತ್ತಷ್ಟು
'ಅಣ್ಣ'ನ ಹುಟ್ಟುಹಬ್ಬ:1400 ಕೈದಿಗಳು ಬಂಧಮುಕ್ತ-ಡಿಎಂಕೆ
ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಹಿಂಸಾಚಾರ
ಮಹಾಸ್ಫೋಟಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ
ಸಿಂಗೂರು: ಬುದ್ಧ-ಮಮತಾ ಮಾತುಕತೆ ವಿಫಲ
ನಕ್ಸಲ್ ಪೀಡಿತ ಪ್ರದೇಶಕ್ಕೆ 500 ಕೋಟಿ: ಪಾಟೀಲ್
ಸಿಂಗೂರ್ ವಿವಾದ ಇತ್ಯರ್ಥಕ್ಕೆ ಬುದ್ದ-ಮಮತಾ ಮಾತುಕತೆ