ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸರಣಿ ಬಾಂಬ್ ಸ್ಫೋಟಕ್ಕೆ 22 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸರಣಿ ಬಾಂಬ್ ಸ್ಫೋಟಕ್ಕೆ 22 ಬಲಿ
PTI
ರಾಜಧಾನಿಯ ಜನನಿಭಿಡವಾದ ಮೂರು ಸ್ಥಳಗಳಲ್ಲಿ ಶನಿವಾರ ಸಂಜೆ ಐದು ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 22 ಮಂದಿ ಬಲಿಯಾಗಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಗಫಾರ್‌ ಮಾರ್ಕೆಟ್‌ನ ಕರೋಲ್ ಭಾಗ್, ಗ್ರೇಟರ್ ಕೈಲಾಸ್‌ನ ಎಂ ಬ್ಲಾಕ್ ಹಾಗೂ ಕೊನ್ನಾಟನ್‌ನ ಗೋಪಾಲ್ ದಾಸ್ ಭವನ ಸೇರಿದಂತೆ ಐದು ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.

ಸುಮಾರು 6.15ರ ವೇಳೆಗೆ ಗಫಾರ್ ಮಾರ್ಕೆಟ್ ಸಮೀಪ ಪ್ರಥಮ ಬಾಂಬ್ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಕನಿಷ್ಠ 20ಮಂದಿ ಗಾಯಗೊಂಡಿದ್ದು, ಅವರೆನ್ನೆಲ್ಲಾ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು 45 ನಿಮಿಷಗಳಲ್ಲಿ 5 ಬಾಂಬ್ ಸ್ಫೋಟ ಸಂಭವಿಸಿದ್ದು ಈವರೆಗೆ ಒಟ್ಟು 18 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇಂಡಿಯನ್ ಮುಜಾಹಿದ್ದೀನ್ ಹೊಣೆ: ಈ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದ್ದು, ಸ್ಫೋಟದ ಹೊಣೆ ಕುರಿತು ಮಾಧ್ಯಮಗಳಿಗೆ ಇ-ಮೇಲ್ ಸಂದೇಶ ಕಳುಹಿಸಿತ್ತು. ಅಲ್ಲದೇ ಅಹಮದಾಬಾದ್‌ನಲ್ಲಿ ಜುಲೈ 26ರಂದು ಸಂಭವಿಸಿದ ಸ್ಫೋಟದ ಹೊಣೆಯನ್ನು ಕೂಡ ಇಂಡಿಯನ್ ಮುಜಾಹಿದ್ದೀನ್ ಹೊತ್ತುಕೊಂಡಿತ್ತು.

'ಆಪರೇಶನ್ ಬಿಎಡಿ' (ಬೆಂಗಳೂರು,ಅಹಮದಾಬಾದ್,ದೆಹಲಿ) ಹೆಸರಿನಲ್ಲಿ ಸರಣಿ ಸ್ಫೋಟ ಕಾರ್ಯಾಚರಣೆಗಿಳಿದಿರುವ ಇಂಡಿಯನ್ ಮುಜಾಹಿದ್ದೀನ್ ಮತ್ತೊಮ್ಮೆ ತನ್ನ ಕ್ರೂರ ಕೃತ್ಯಕ್ಕೆ ಅಮಾಯಕರನ್ನು ಬಲಿ ತೆಗೆದುಕೊಂಡಿದೆ.

ಗುಪ್ತಚರ ಇಲಾಖೆ ಎಚ್ಚರಿಕೆ: ಉಗ್ರರ ಮುಂದಿನ ಭಯೋತ್ಪಾದನಾ ದಾಳಿ ದೆಹಲಿ ಮತ್ತು ಚೆನ್ನೈ ಎಂಬುದಾಗಿ ಈ ಮೊದಲೇ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿರುವುದಾಗಿ ಹೇಳಿದೆ. ಅಲ್ಲದೇ ಉಗ್ರರ ಮುಂದಿನ ಗುರಿ ದೆಹಲಿ ಎಂದು ಗುಜರಾತ್ ಪೊಲೀಸರು ಕೂಡ ಕೇಂದ್ರಕ್ಕೆ ಸ್ಪಷ್ಟ ಮಾಹಿತಿ ನೀಡಿತ್ತು.

ಪ್ರಧಾನಿ ಖಂಡನೆ: ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಕೃತ್ಯವನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮುಂಬೈ ಹೈ ಅಲರ್ಟ್: ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆಯೇ ಮುಂಬೈ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಗರ್ಭಪಾತ ಅವಧಿ 24 ವಾರಗಳಿಗೇರಿಕೆ
'ಅಣ್ಣ'ನ ಹುಟ್ಟುಹಬ್ಬ:1400 ಕೈದಿಗಳು ಬಂಧಮುಕ್ತ-ಡಿಎಂಕೆ
ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಹಿಂಸಾಚಾರ
ಮಹಾಸ್ಫೋಟಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ
ಸಿಂಗೂರು: ಬುದ್ಧ-ಮಮತಾ ಮಾತುಕತೆ ವಿಫಲ
ನಕ್ಸಲ್ ಪೀಡಿತ ಪ್ರದೇಶಕ್ಕೆ 500 ಕೋಟಿ: ಪಾಟೀಲ್