ಇಪ್ಪತ್ತೆರಡು ಮಂದಿಯನ್ನು ಬಲಿತೆಗೆದುಕೊಂಡು 130ಕ್ಕೂ ಅಧಿಕ ಮಂದಿಗೆ ಗಾಯಗೊಳಿಸಿರುವ ದೆಹಲಿ ಸರಣಿ ಸ್ಫೋಟದ ಜವಾಬ್ದಾರಿ ಹೊತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆ ಕಳುಹಿಸಿರುವ ಇ-ಮೇಲ್ ಅನ್ನು ಮುಂಬೈನ ಹೊರವಲಯ ಚೆಂಬೂರಿನಿಂದ ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸ್ ಸೈಬರ್ ಕ್ರೈಮ್ ಸೆಲ್ ಹೇಳಿದೆ.
ಇ-ಮೇಲನ್ನು ವಿ-ಫಿ ಅಕೌಂಟ್‌ನಿಂದ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. [email protected] ಎಂಬ ಇ-ಮೇಲ್ ವಿಳಾಸದಿಂದ ಕಳುಹಿಸಲಾಗಿರುವ ಮೇಲ್‌ನಲ್ಲಿ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದು, "ನೀವು ಏನು ಬೇಕಿದ್ದರೂ ಮಾಡಿ, ಸಾಧ್ಯವಿದ್ದಲ್ಲಿ ನಮ್ಮನ್ನು ತಡೆಯಿರಿ ನೋಡೋಣ" ಎಂಬುದಾಗಿ ಹೇಳಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ದೆಹಲಿ, ಗುಜರಾತ್ ಮತ್ತು ರಾಜಸ್ಥಾನ ಪೊಲೀಸರು ಈ ಸ್ಫೋಟಕ್ಕೂ ಜೈಪುರ ಮತ್ತು ಅಹಮದಾಬಾದಿನಲ್ಲಿ ನಡೆದಿರುವ ಸ್ಫೋಟಗಳಿಗೂ ಸಂಪರ್ಕವಿದೆಯೇ ಎಂಬ ತನಿಖೆಗೆ ಮುಂದಾಗಿದ್ದಾರೆ.
ನಿಷೇಧಿತಿ ಸಿಮಿ ಸಂಘಟನೆಯು ತನ್ನ ಕಾರ್ಯಕರ್ತರನ್ನೇ ಇಂಡಿಯನ್ ಮುಜಾಹಿದೀನ್‌ನಲ್ಲಿ ನೇಮಿಸಿದೆ ಎಂದು ಹೇಳಲಾಗಿದ್ದು, ಪೊಲೀಸರು ಈ ಕೋನದಿಂದಲೂ ತನಿಖೆ ಮಾಡುತ್ತಿದ್ದಾರೆ.
ಬಾಂಬ್‌ಗಳಿಗೆ ಬಳಸಲಾದ ಸಾಮಾಗ್ರಿಗಳನ್ನ ಪತ್ತೆಹಚ್ಚಲು ಫಾರೆನ್ಸಿಕ್ ತಂಡಗಳು ಪ್ರಯತ್ನಿಸುತ್ತಿವೆ.
ಬಾಂಬ್ ಗರಿಷ್ಠ ಪರಿಣಾಮ ಬೀರಬೇಕು ಎಂಬ ಹಿನ್ನೆಲೆಯಲ್ಲಿ ಇಂಧನ ತೈಲದೊಂದಿಗೆ ಅಮೋನಿಯಂ ನೈಟ್ರೇಟ್ ಬಳಸಿ ಲೋಹದ ಚೆಂಡುಗಳೊಂದಿಗೆ ಪ್ಯಾಕ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
|