ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸರಣಿ ಸ್ಫೋಟ: 8 ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸರಣಿ ಸ್ಫೋಟ: 8 ಬಂಧನ
PTI
ಉಗ್ರರು ಶನಿವಾರ ನಡೆಸಿರುವ ವಿಧ್ವಂಸಕಾರಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಕುಕೃತ್ಯದ ಕುರಿತು ಬಲವಾದ ಸುಳಿವು ಲಭಿಸಿರುವುದಾಗಿ ತಿಳಿಸಿರುವ ದೆಹಲಿ ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ವಿಶ್ವಾಸ ಹೊಂದಿದ್ದಾರೆ.

ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಲವಾದ ಸುಳಿವು ಲಭಿಸಿರುವುದಾಗಿ ದೆಹಲಿ ಪೋಲೀಸ್ ವಕ್ತಾರರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಬಿಟ್ಟು ಕೊಡದೇ ಇದ್ದರೂ ಸ್ಫೋಟದ ಜವಾಬ್ದಾರಿ ವಹಿಸಿಕೊಂಡಿರುವ ಇಂಡಿಯನ್ ಮುಜಾಹಿದೀನ್‌ನೊಂದಿಗೆ ಲಷ್ಕರೆ ಮತ್ತು ಸಿಮಿಯ ಕೈವಾಡದ ಕುರಿತು ತನಿಖೆ ನಡೆಸಲಾಗುತ್ತಿದೆ.

ದೆಹಲಿಯಲ್ಲಿ ಶನಿವಾರ ಸಾಯಂಕಾಲ 45 ನಿಮಿಷಗಳಲ್ಲಿ 5 ಬಾಂಬ್ ಸ್ಫೋಟ ನಡೆದಿದ್ದು, ಈವರೆಗೆ ಒಟ್ಟು 21 ಮಂದಿ ಸಾವನ್ನಪ್ಪಿದ್ದು, 97ಕ್ಕಿಂತಲೂ ಆಧಿಕ ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
PTI


ಶನಿವಾರ ಸಾಯಂಕಾಲ ಸುಮಾರು 6.15ರ ವೇಳೆಗೆ ಗಫರ್ ಮಾರ್ಕೆಟ್ ಸಮೀಪ ಪ್ರಥಮ ಬಾಂಬ್ ಸ್ಫೋಟ ಸಂಭವಿಸಿತು. ಇದು ದಿಲ್ಲಿಯ ಜನಪ್ರಿಯ ಖರೀದಿ ತಾಣವಾಗಿದೆ. ತುಸು ಹೊತ್ತಿನ ಬಳಿಕ ದಿಲ್ಲಿಯ ಹೃದಯ ಭಾಗ ಕನ್ನೌಟ್ ಪ್ರದೇಶದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಂಡವು. ನಂತರ ದಕ್ಷಿಣ ದಿಲ್ಲಿಯ ಸಿರಿವಂತ ಮಂದಿ ಖರೀದಿ ನಡೆಸುವ ಕೈಲಾಸ್ ಎಂ ಬ್ಲಾಕ್ ಮಾರುಕಟ್ಟೆಯಲ್ಲಿ ಎರಡು ಬಾಂಬ್ ಸ್ಫೋಟಗೊಂಡವು. ಅತಿ ಹೆಚ್ಚು ಹಾನಿ ಮಾಡಿದ ಸ್ಫೋಟವು ಕರೋಲ್ ಭಾಗ್‌ನ ಗಫರ್ ಮಾರುಕಟ್ಟೆ ಪ್ರದೇಶದಲ್ಲಿ ಸಂಭವಿಸಿದೆ.


ಮತ್ತಷ್ಟು
ಉಗ್ರವಾದಕ್ಕೆ ಮೃದು ಧೋರಣೆ ಕಾರಣ: ಮೋದಿ
ಕಪ್ಪು ವಸ್ತ್ರ ತೊಟ್ಟವರು ಬಾಂಬಿಟ್ಟರು: ಬಾಲಕ
ಸಾಧ್ಯವಿದ್ದಲ್ಲಿ ತಡೆಯಿರಿ: ಇ-ಮೇಲ್‌ನಲ್ಲಿ ಉಗ್ರರು
ದೆಹಲಿ ಸರಣಿ ಬಾಂಬ್ ಸ್ಫೋಟಕ್ಕೆ 22 ಬಲಿ
ಗರ್ಭಪಾತ ಅವಧಿ 24 ವಾರಗಳಿಗೇರಿಕೆ
'ಅಣ್ಣ'ನ ಹುಟ್ಟುಹಬ್ಬ:1400 ಕೈದಿಗಳು ಬಂಧಮುಕ್ತ-ಡಿಎಂಕೆ