ಖೈರ್ಲಂಜಿ ದಲಿತ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಬಳಿಕ ಸೋಮವಾರ ನಾಗ್ಪುರದ ತ್ವರಿತಗತಿಯ ನ್ಯಾಯಾಲಯ ಎಂಟು ಮಂದಿಯನ್ನು ದೋಷಿತರೆಂದು ತೀರ್ಪು ನೀಡಿ, ಮೂರು ಮಂದಿಯನ್ನು ಖುಲಾಸೆಗೊಳಿಸಿದೆ.
2006ರ ಸೆಪ್ಟೆಂಬರ್ 29ರಂದು ಖೈರ್ಲಂಜಿಯ ದಲಿತ ಕುಟುಂಬದ ಮಹಿಳೆ ಮತ್ತು ಮೂರು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈಯಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರದ ಎಸ್.ಎಸ್.ಕಾಸ್ಸ್ ಅವರು, ಗೋಪಾಲ್ ಬಿನ್‌ಜೆವಾರ್, ಸಾಕ್ರೂ ಬಿನ್‌ಜೆವಾರ್, ಶತ್ರುಘ್ನ ಧಾಂಡೆ, ವಿಶ್ವನಾಥ್ ಧಾಂಡೆ, ರಾಮು ಧಾಂಡೆ, ಜಗದೀಶ್ ಮಂಡ್ಲೆಕರ್,ಪ್ರಭಾಕರ್ ಮಂಡ್ಲೆಕರ್ ಮತ್ತು ಶಿಶ್‌ಪಾಲ್ ಧಾಂಡೆಯನ್ನು ದೋಷಿತರೆಂದು ತೀರ್ಪು ನೀಡಿದರು.
ಮಹೀಪಾಲ್ ಧಾಂಡೆ,ಧರ್ಮಪಾಲ್ ಧಾಂಡೆ ಮತ್ತು ಪುರುಷೋತ್ತಮ್ ತಿತರ್‌ಮಾರೆ ಸೇರಿದಂತೆ ಮೂವರನ್ನು ದೋಷಮುಕ್ತಗೊಳಿಸಿದರು.
ಅವರ ಪುತ್ರಿ ಪ್ರಿಯಾಂಕಳನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಸುರೇಖ ಅವರನ್ನು ಗುಂಪೊಂದು ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿ, ಕೋಲುಗಳಿಂದ ಮತ್ತು ಬೈಸಿಕಲ್ ಚೈನ್‌ಗಳಿಂದ ಥಳಿಸಿದರೆಂದು ಹೇಳಲಾಗಿದೆ. ಆಕೆಯ ತಲೆಯನ್ನು ಮತ್ತೆ ಮತ್ತೆ ಗೋಡೆಗೆ ಜಜ್ಜಿದಾಗ ಆಕೆ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸುರೇಖರ 17 ವರ್ಷ ಪ್ರಾಯದ ಪ್ರಿಯಾಂಕ ಮೇಲೆ ಗುಂಪಿನ ಆಕ್ರೋಶ ತಿರುಗಿತು. ದನದಕೊಟ್ಟಿಗೆಯಲ್ಲಿ ಅಡಗಿದ್ದ ಪ್ರಿಯಾಂಕಳನ್ನು ಹೊರಗೆಳೆದು ಮಾರಣಾಂತಿಕವಾಗಿ ಥಳಿಸಿದ್ದರಿಂದ ಆಕೆ ಸತ್ತಳೆಂದು ಆರೋಪಿಸಲಾಗಿದೆ. ಅವರ ಇಬ್ಬರು ಸೋದರರನ್ನು ಅವರೊಬ್ಬ ಕುರುಡನಾಗಿದ್ದರೂ ದುಷ್ಕರ್ಮಿಗಳು ಬಿಡದೆ ಥಳಿಸಿ ಹತ್ಯೆಗೈದಿದ್ದರು.
|