ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಲಷ್ಕರ್ ಎ ತೋಯ್ಬಾ ಸಂಚು ರೂಪಿಸಿರುವುದಾಗಿ ರಿಸರ್ಚ್ ಎಂಡ್ ಅನಾಲಿಸಿಸ್ (ರಾ)ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಸೋಮವಾರದಂದು ಮುನ್ನೆಚ್ಚರಿಕೆ ನೀಡಿದೆ.
ವಿವಿಐಪಿಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸುವ ಉದ್ದೇಶದಿಂದ ಲಷ್ಕರ ಈಗಾಗಲೇ ಎರಡು ಪಿದಾಯಿನ್ (ಆತ್ಮಹತ್ಯಾ ದಳ) ಗುಂಪನ್ನು ದೆಹಲಿಗೆ ಕಳುಹಿಸಿಕೊಟ್ಟಿರುವುದಾಗಿ ರಾ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಪ್ರಮುಖ ಗುರಿಯಾಗಿದ್ದು, ಅದರೊಂದಿಗೆ ಭಾರತೀಯ ಜನತಾಪಕ್ಷದ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ಹಿಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಪಿದಾಯಿನ್ ಗುಂಪಲ್ಲಿ ತಲಾ ನಾಲ್ಕು ಮಂದಿ ಹೊಂದಿರುವುದಾಗಿ ರಾ ವರದಿ ಹೇಳಿದೆ. ಆ ನಿಟ್ಟಿನಲ್ಲಿ ಲಷ್ಕರ್ ವಿವಿಐಪಿಗಳ ಹತ್ಯೆಗೆ ಸಂಚು ರೂಪಿಸಿರುವುದಾಗಿ ರಾ ಮುನ್ನೆಚ್ಚರಿಕೆ ನೀಡಿದೆ.
|