ಸಮಗ್ರ ಉಗ್ರವಾದ ವಿರೋಧಿ ಕಾನೂನುಗಳು ಮತ್ತು ರಾಷ್ಟ್ರದಲ್ಲಿ ಉಗ್ರವಾದಿ ಕೃತ್ಯಗಳ ತನಿಖೆಗಾಗಿ ಫೆಡರಲ್ ಏಜೆನ್ಸಿ ವ್ಯವಸ್ಥೆಯ ಸ್ಥಾಪನೆಗಾಗಿ ದ್ವಿತೀಯ ಆಡಳಿತ ಸುಧಾರಣಾ ಸಮಿತಿ(ಎಆರ್‌ಸಿ) ಶಿಫಾರಸ್ಸು ಮಾಡಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧದಡಿಯಲ್ಲಿ ಬಂಧನಕ್ಕೀಡಾಗಿರುವ ಯಾವುದೇ ವ್ಯಕ್ತಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಬಾರದು ಎಂದೂ ಸಮಿತಿ ಹೇಳಿದೆ.
ಈ ವರದಿಯನ್ನು ಬಿಡುಗಡೆ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಆರ್‌ಸಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ, ಉಗ್ರವಾದಿ ಅಪರಾಧಗಳ ತನಿಖೆಗೆ ಒಕ್ಕೂಟ ತನಿಖಾ ವ್ಯವಸ್ಥೆಯು ಅಗತ್ಯ ಎಂಬ ದೃಷ್ಟಿಕೋನವನ್ನು ಆಯೋಗ ಹೊಂದಿರುವುದಾಗಿ ನುಡಿದರು.
"ಸಮಗ್ರ ಉಗ್ರವಾದಿ ವಿರೋಧಿ ಕಾನೂನುಗಳಿಗೆ ಆಡಳಿತ ಸುಧಾರಣಾ ಸಮಿತಿಯು ಶಿಫಾರಸ್ಸು ಮಾಡುತ್ತದೆ" ಎಂದು ವೀರಪ್ಪ ಮೊಯ್ಲಿ ನುಡಿದರು.
ಭಯೋತ್ಪಾದನಾ ಸಂಬಂಧಿ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ (ಸ್ಪೆಷಲ್ ಫಾಸ್ಟ್ ಟ್ರಾಕ್) ನ್ಯಾಯಾಲಯಗಳ ಸ್ಥಾಪನೆಗೂ ಸಮಿತಿ ಶಿಫಾರಸ್ಸು ಮಾಡಿದೆ.
ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸುವ ನಿಧಿಗಳ ಹರಿವನ್ನು ತಡೆಯಲೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
|