ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಫೋಟದ 'ಮಾಸ್ಟರ್ ಮೈಂಡ್' ಅಬ್ದುಲ್ ಸುಭಾನ್ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟದ 'ಮಾಸ್ಟರ್ ಮೈಂಡ್' ಅಬ್ದುಲ್ ಸುಭಾನ್ ?
ಅಹಮದಾಬಾದ್, ದೆಹಲಿ, ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಅಬ್ದುಲ್ ಸುಭಾನ್ ಆಲಿಯಾಸ್ ತೌಖೀರ್‌ಗಾಗಿ ಮುಂಬೈಯಲ್ಲಿ ತೀವ್ರ ಶೋಧಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಪ್ರಕರಣದ ರೂವಾರಿ ಎಂದು ಶಂಕಿಸಲಾದ ಸುಭಾನ್ ಆಲಿಯಾಸ್ ತೌಖೀರ್ ಕುರಿತಾಗಿ ಈಗಾಗಲೇ ಇಂಟರ್‌ಫೋಲ್ ಭಾರತದ ಗುಪ್ತಚರ ಇಲಾಖೆಗೆ ಎಚ್ಚರಿಕೆ ನೀಡಿದೆ.

ಆತನ ಬಂಧನಕ್ಕಾಗಿ ಮುಂಬೈ ಮತ್ತು ಗುಜರಾತ್ ಪೊಲೀಸರು ದೆಹಲಿ ಪೊಲೀಸರ ಕಾರ್ಯಾಚರಣೆಯೊಂದಿಗೆ ಕೈ ಜೋಡಿಸಿದ್ದಾರೆ. ಜೈಪುರ,ಫೈಜಾಬಾದ್,ಅಹಮದಾಬಾದ್ ಸೇರಿದಂತೆ ದೆಹಲಿ ಸ್ಫೋಟದ ಹೊಣೆ ಹೊತ್ತು ಇ-ಮೇಲ್ ಸಂದೇಶ ರವಾನಿಸಿದ ವ್ಯಕ್ತಿಯಾಗಿದ್ದಾನೆ.

ಆ ನಿಟ್ಟಿನಲ್ಲಿ ಸುಭಾನ್ ಸೆರೆಗಾಗಿ ಮುಂಬೈ, ಗುಜರಾತ್, ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, ಅಬ್ದುಲ್ ಸುಭಾನ್‌ನನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ವ್ಯಕ್ತಪಡಿಸಿದೆ.

ಸುಭಾನ್ ಕುರಿತು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದು,ಆತ ಇಂಡಿಯನ್ ಮುಜಾಹಿದ್ದೀನ್ ವ್ಯಕ್ತಿಯಾಗಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ 30ರ ಹರೆಯದ ಅಬ್ದುಲ್ ಸುಭಾನ್ ಖುರೇಶಿ ಆಲಿಯಾಸ್ ತೌಖೀರ್ ಆಲಿಯಾಸ್ ತೌಖೀರ್ ಬಿಲಾಲ್ ದೆಹಲಿ ಸ್ಫೋಟದ ರೂವಾರಿಯಾಗಿದ್ದು,ಆತನ ಬಂಧನಕ್ಕಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಭಯೋತ್ಪಾದನೆ ತಡೆಗೆ ಫೆಡರಲ್ ಏಜೆನ್ಸಿ ಸ್ಥಾಪನೆಗೆ ಶಿಫಾರಸ್ಸು
ಇವನು ಭಾರತದ ಒಸಮಾ ಬಿನ್ ಲಾಡೆನ್?
ಕಂಧಮಲ್‌ನಲ್ಲಿ ಮತ್ತೆ ಗಲಭೆ, ಪೊಲೀಸ್ ಸಾವು
ಜೈಪುರ ಅಪಘಾತ: 7 ಮಂದಿ ದುರಂತ ಅಂತ್ಯ
ಸಂಸತ್ತು ಒಪ್ಪಿದರೆ ಫೋಟಾ ಮರುಜಾರಿಯಾಗಲಿ: ಶಿವರಾಜ್
ಪಾಟೀಲ್ ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಾಗ