ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಾರಾಷ್ಟ್ರದಲ್ಲಿ ಲಘು ಕಂಪನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾರಾಷ್ಟ್ರದಲ್ಲಿ ಲಘು ಕಂಪನ
ಪಶ್ಚಿಮ ಮಹಾರಾಷ್ಟ್ರದ ಸತಾರ ಪ್ರಾಂತ್ಯದಲ್ಲಿ ಬುಧವಾರ ನಸುಕಿನಲ್ಲಿ ಲಘು ಕಂಪನ ಸಂಭವಿಸಿದೆ.

ಕೊಯ್ನಾ ಅಣೆಕಟ್ಟಿನಿಂದ 13.6 ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿದ್ದ ಭೂಕಂಪನ ರಿಕ್ಟರ್ ಮಾಪನದಲ್ಲಿ 4.8ರ ತೀವ್ರತೆ ಹೊಂದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

ತನ್ನ ಸಾಮರ್ಥ್ಯದಷ್ಟು ಸಂಪೂರ್ಣ ತುಂಬಿರುವ ಅಣೆಕಟ್ಟಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ನಸುಕಿಗೂ ಮುಂಚಿನ ಅವಧಿಯ 3.17 ಗಂಟೆ ವೇಳೆಗೆ ಸುಮಾರು 30 ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು ಎಂದು ತಿಳಿಸಿರುವ ಅಧಿಕಾರಿಗಳು, ಭೂಕಂಪದಿಂದಾಗಿ ಯಾವುದೇ ಸಾವು ನೋವುಗಳು ಸಂಭವಿಸಿರುವ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಐಐಎಂಗಳಿಗೆ ಲೆಹ್ಮಾನ್ ಕುಸಿತದ ಬಿಸಿ
ಉಗ್ರವಾದ ನಿಗ್ರಹ: ಪ್ರಧಾನಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ
ಮಾತಿಗೆ ತಪ್ಪಿದ 'ಬುದ್ದ'-ಬ್ಯಾನರ್ಜಿ ಆರೋಪ
ಕನ್ನಡ ನಟಿ ಮೇರಿ ಜಾಮೀನು ಅರ್ಜಿ ವಜಾ
ಸ್ಫೋಟದ 'ಮಾಸ್ಟರ್ ಮೈಂಡ್' ಅಬ್ದುಲ್ ಸುಭಾನ್ ?
ಭಯೋತ್ಪಾದನೆ ತಡೆಗೆ ಫೆಡರಲ್ ಏಜೆನ್ಸಿ ಸ್ಥಾಪನೆಗೆ ಶಿಫಾರಸ್ಸು