ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರದಲ್ಲಿ ಯುದ್ಧವಿಮಾನ ನಿಯೋಜನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರದಲ್ಲಿ ಯುದ್ಧವಿಮಾನ ನಿಯೋಜನೆ
ಭಾರತವು ತನ್ನ ಉನ್ನತ ಫೈಟರ್ ಜೆಟ್‌ಗಳನ್ನು ಕಾಶ್ಮೀರದಲ್ಲಿ ನಿಯೋಜಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಣ್ವಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಇರುವ ಸೋವಿಯತ್ ನಿರ್ಮಾಣದ ಸುಕೋಯಿ-30ಎಂಕೆಐ ಜೆಟ್‌ಗಳನ್ನು ಶ್ರೀನಗರ ಸಮೀಪದ ಅವಂತಿ ಪುರ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ.

ಕಾಶ್ಮೀರದಲ್ಲಿ ಯುದ್ಧ ವಿಮಾನಗಳ ನಿಯೋಜನೆಯು ಭಾರತ-ಪಾಕಿಸ್ತಾನದ ಶಾಂತಿ ಪ್ರಕ್ರಿಯೆಗೆ ಹಿನ್ನಡೆಯುಂಟು ಮಾಡಿದೆ. ಗಡಿನಿಯಂತ್ರಣ ರೇಖೆಯಲ್ಲಿ ಕದನವಿರಾಮ ಉಲ್ಲಂಘನೆ, ಹಾಗೂ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ನವದೆಹಲಿಯು ಇಸ್ಲಾಮಾಬಾದನ್ನು ದೂರಿದೆ.

ಕಾಶ್ಮೀರದಲ್ಲಿ ಸುಕೋಯಿ ಯುದ್ಧ ವಿಮಾನಗಳ ನಿಯೋಜನೆಯು ಯಾವುದೇ ಸಂಭಾವ್ಯ ಬೆದರಿಕೆಯನ್ನು ಎದುರಿಸಲಿದೆ ಎಂದು ಹೆಸರು ಹೇಳಲಿಚ್ಛಿಸದ ವಾಯು ಪಡೆ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ. ಆದರೆ, ಇದೊಂದು ರಕ್ಷಣಾತ್ಮಕ ಕ್ರಮ ಅಷ್ಟೆ ಎಂದು ಅವರು ಹೇಳಿದ್ದಾರೆ.

ಇದೊಂದು ತಾತ್ಕಾಲಿಕ ನಿಯೋಜನೆ ಎಂಬುದಾಗಿ ಭಾರತದ ಪಶ್ಚಿಮ ವಿಭಾಗದ ಏರ್ ಕಮಾಂಡರ್ ಏರ್ ಮಾರ್ಷಲ್ ಪಿ.ಕೆ.ಬಾರ್ಬೊರ ಹೇಳಿರುವುದನ್ನು ಪತ್ರಿಕೆಯೊಂದು ಉಲ್ಲೇಖಿಸಿದೆ.

ಚೀನಗಡಿ ತನಕ ಮತ್ತು 1999ರಲ್ಲಿ ಭಾರತ-ಪಾಕಿಸ್ತಾನದ ನಡುವೆ ಮಿನಿ ಯುದ್ಧ ನಡೆದ ಕಾರ್ಗಿಲ್ ಬೆಟ್ಟಗಳಾದ್ಯಂತವೂ ಸುಕೋಯ್ ವಿಮಾನಗಳು ಗಸ್ತು ತಿರುಗಲಿವೆ ಎಂದು ವಾಯುಪಡೆ ಅಧಿಕಾರಿ ತಿಳಿಸಿದ್ದಾರೆ.

ವಿಶ್ವದ ಬೃಹತ್ ವಾಯುಪಡೆಗಳಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಭಾರತೀಯ ವಾಯುಪಡೆಯು ಚೀನಗಡಿಗೆ ಸಮೀಪ ಈಶಾನ್ಯ ಪ್ರಾಂತ್ಯದಲ್ಲೂ 40 ಸುಕೋಯ್‌ಗಳನ್ನು ನಿಯೋಜಿಸಲು ಯೋಜಿಸುತ್ತಿದೆ.
ಮತ್ತಷ್ಟು
ಮಹಾರಾಷ್ಟ್ರದಲ್ಲಿ ಲಘು ಕಂಪನ
ಐಐಎಂಗಳಿಗೆ ಲೆಹ್ಮಾನ್ ಕುಸಿತದ ಬಿಸಿ
ಉಗ್ರವಾದ ನಿಗ್ರಹ: ಪ್ರಧಾನಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ
ಮಾತಿಗೆ ತಪ್ಪಿದ 'ಬುದ್ದ'-ಬ್ಯಾನರ್ಜಿ ಆರೋಪ
ಕನ್ನಡ ನಟಿ ಮೇರಿ ಜಾಮೀನು ಅರ್ಜಿ ವಜಾ
ಸ್ಫೋಟದ 'ಮಾಸ್ಟರ್ ಮೈಂಡ್' ಅಬ್ದುಲ್ ಸುಭಾನ್ ?