ಶ್ರೀನಗರ: ನಗರದ ಕೇಂದ್ರ ಪ್ರದೇಶ ಬುದ್ಶಾ ಚೌಕದಲ್ಲಿ ಬುಧವಾರ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.
ಅಕಾರ ಕಟ್ಟದ ಪ್ರವೇಶದಲ್ಲಿರುವ ಭದ್ರತಾ ಸಿಬ್ಬಂದಿಗಳಿರುವ ಸ್ಥಳಕ್ಕೆ ಗುರಿ ಇರಿಸಿ ಎಸೆದ ಗ್ರೆನೇಡ್ ಗುರಿ ತಪ್ಪಿದೆ.
ಈ ಗ್ರೆನೇಡ್ ರಸ್ತೆ ಬದಿಯಲ್ಲಿ ಸ್ಫೋಟಗೊಳ್ಳುವ ಮುನ್ನ ಬಸ್ಸೊಂದಕ್ಕೆ ಅಪ್ಪಳಿಸಿತು. ಗ್ರೆನೇಡ್ ಸ್ಫೋಟದಿಂದಾಗಿ 15 ಪಾದಚಾರಿಗಳು ಗಾಯಗೊಂಡಿದ್ದಾರೆ. ಈ ಪ್ರದೇಶವನ್ನು ತಕ್ಷಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಪ್ರದೇಶ ಲಾಲ್ ಚೌಕ ಸಮೀಪದ ಬುದ್ಶಾಚೌಕ ಪ್ರದೇಶದಲ್ಲಿ ಗೆರಿಲ್ಲಾಗಳು ಸಿಆರ್‌ಪಿಎಫ್ ಪೊಲೀಸರ ಮೇಲೆ ಗುರಿ ಇರಿಸಿದಾಗ ಈ ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
|