ಕಳೆದ ಶನಿವಾರ ದೆಹಲಿಯಲ್ಲಿ ನಡೆಸಲಾಗಿರುವ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪ್ರಗತಿಯುಂಟಾಗಿದ್ದು, ಗಫರ್ ಮಾರುಕಟ್ಟೆ ಸ್ಫೋಟ ಸ್ಥಳದ ಹಾಗೂ ಸಜೀವ ಬಾಂಬ್ ಪತ್ತೆಯಾಗಿರುವ ಇಂಡಿಯಾ ಗೇಟ್ ಬಳಿಯ ಬೆರಳಚ್ಚುಗಳಿಗೆ ಹೋಲಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಪೊಲೀಸರು ಇದೀಗ ಬಿಡುಗಡೆ ಮಾಡಿರುವ ಉಗ್ರರ ಸ್ಕೆಚ್‌ಗಳಲ್ಲಿ ಓರ್ವ ಕರೋಲ್ ಬಾಗ್‌ನ ಗಫರ್ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಿದ್ದರೆ, ಇನ್ನಿಬ್ಬರು ಬಾರಾಕಂಬ ರಸ್ತೆಯಲ್ಲಿ ಕಟ್ಟಡ ಒಂದರ ಪಕ್ಕ ಬಾಂಬ್ ಇರಿಸಿದ್ದಾರೆ ಎಂದು ಹೇಳಲಾಗಿದೆ.
ಈ ಸ್ಕೆಚ್‌ಗಳಿಗೆ ಹೋಲುವ ವ್ಯಕ್ತಿಗಳನ್ನು ಕಂಡಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು, ತಿಳಿಸಿದವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ದೆಹಲಿ ಪೊಲೀಸ್ ವಕ್ತಾರ ರಾಜನ್ ಭಗತ್ ವರದಿಗಾರರಿಗೆ ತಿಳಿಸಿದ್ದಾರೆ.
ಗಫರ್ ಮಾರುಕಟ್ಟೆ ಮತ್ತ ಬಾರಾಕಂಬ ರಸ್ತೆಗಳಲ್ಲಿ ಬಾಂಬ್‌ಗಳನ್ನು ಇರಿಸಿರುವ ವ್ಯಕ್ತಿಗಳನ್ನು ನೋಡಿದ್ದೇವೆ ಎಂದು ಹೇಳಿರುವ ಕನಿಷ್ಠ ಐವರು ಪ್ರತ್ಯಕ್ಷದರ್ಶಿಗಳ ಸಂಪರ್ಕದ ಬಳಿಕ ಈ ಸ್ಕೆಚ್‌ಗಳನ್ನು ರಚಿಸಲಾಗಿದೆ.
ಬಲೂನು ಮಾರುವ ಹುಡುಗನಲ್ಲದೆ, ಆ ಪ್ರದೇಶದಲ್ಲಿ ಬ್ರೆಡ್‌ರೋಲ್ ಮಾರುವ ತಂದೆ ಮಗನನ್ನೂ ವಿಚಾರಿಸಲಾಗಿದೆ.
ಶನಿವಾರ ಸಾಯಂಕಲ ನಡೆಸಿರುವ ಈ ವಿಧ್ವಂಸ ಕೃತ್ಯದಲ್ಲಿ ಕನಿಷ್ಠ ಪಕ್ಷ 24 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
|