ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಎಂದು ಶಂಕಿಸಿರುವ ತೌಖೀರ್ ಕುಟುಂಬ ಘಟನೆಯನ್ನು ಖಂಡಿಸಿದ್ದು,ಇದರಲ್ಲಿ ತನ್ನ ಮಗ ತಪ್ಪು ಮಾಡಿಲ್ಲ ಆತ ಅಮಾಯಕ ಎಂದು ತಾಯಿ ಜುಬೈಗಾ ಖುರೇಷಿ ತಿಳಿಸಿದ್ದಾರೆ.
ತೌಖೀರ್ ತಪ್ಪಿತಸ್ಥನಲ್ಲ ಎಂಬುದನ್ನು ಸಾಬೀತುಪಡಿಸಲಿಕ್ಕಾಗಿ ನಾವು ಮುಕ್ತ ವಿಚಾರಣೆಗೆ ತಯಾರಾಗಿದ್ದೇವೆ ಎಂದು ಜುಬೈದಾ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಇದೀಗ ಮಾಧ್ಯಮದವರು ತನ್ನ ಮಗ ದೆಹಲಿ ಬಾಂಬ್ ಸ್ಫೋಟದ ರೂವಾರಿ ಎಂದು ಬಿಂಬಿಸುತ್ತಿವೆ. ನಾವು ಗೌರವಾನ್ವಿತ ಕುಟುಂಬದಿಂದ ಬಂದವರಾಗಿದ್ದೇವೆ ಹಾಗೂ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಷ್ಟಾಚಾರಗಳನ್ನು ಕಲಿಸಿದ್ದೇವೆ. ಆ ನಿಟ್ಟಿನಲ್ಲಿ ಆತ ಈ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೇ ತೌಖೀರ್ ಜೀವಂತವಾಗಿದ್ದಾನೆಯೇ ಅಥವಾ ಸಾವನ್ನಪ್ಪಿದ್ದಾನೆಯೇ ಎಂಬುದು ಈವರೆಗೂ ನಮಗೆ ಖಚಿತ ಮಾಹಿತಿ ಲಭಿಸಿಲ್ಲ ಎಂದು ಆತನ ಕುಟುಂಬದ ವಕೀಲರು ತಿಳಿಸಿದ್ದಾರೆ.
|