ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅಕ್ಟೋಬರ್ 17 ರಂದು ಗ್ರಾಮೀಣ ಮಟ್ಟದಲ್ಲಿ ಹಿಸಾರ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್(ಪಿಆರ್ಐ)ಗಳಿಗೆ ನಿರ್ಮಲ್ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ
ಕೇಂದ್ರ ಸರಕಾರವು ಹರ್ಯಾಣವನ್ನು ಗ್ರಾಮೀಣ ಮಟ್ಟದ ಮೊದಲ ನಿರ್ಮಲ್ ಗ್ರಾಮ ಪುರಸ್ಕಾರದ ಆತಿಥ್ಯ ವಹಿಸಿಕೊಳ್ಳುವುದೆಂದು ವಿಶ್ವಾಸವಿಟ್ಟಿರುವುದಾಗಿ ಕೇಂದ್ರ ಆರ್ಥಿಕ ಆಯುಕ್ತ ಮತ್ತು ಪ್ರಧಾನ ಸೆಕ್ರೆಟರಿ (ಅಭಿವೃದ್ಧಿ ಮತ್ತು ಪಂಚಾಯತ್)ನ ಊರ್ವಶಿ ಗುಲಾಟಿ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ನಾಲ್ಕರಿಂದ ಐದು ಸಾವಿರದಷ್ಟು ಜನ ಭಾಗವಹಿಸುವ ನಿರೀಕ್ಷೆಯಿದೆ.
ನಿರ್ಮಲ್ ಗ್ರಾಮ ಪುರಸ್ಕಾರ್ ಯೋಜನೆಯು ಕೇಂದ್ರ ಸರಕಾರ ಪ್ರತ್ಯೇಕ ಪಂಗಡವನ್ನು ಉದ್ದೇಶವಿಟ್ಟುಕೊಂಡು ಸ್ಥಾಪಿಸಲಾದ ಯೋಜನೆಯಾಗಿದ್ದು ಪಂಚಾಯತ್ ರಾಜ್ ಸಂಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ್, ಹಿಮಾಚಲ್ ಪ್ರದೇಶ್, ಉತ್ತರಖಂಡ್, ಪಂಜಾಬ್, ಹರ್ಯಾಣ ಮತ್ತು ಜಮ್ಮು ಕಾಶ್ಮೀರದ ಪಿಆರ್ಐ ಕಾರ್ಯನಿರ್ವಾಹಕ ಕೇಂದ್ರಗಳಿಗೆ ಈ ಪ್ರಶಸ್ತಿ ಲಭಿಸುವುದೆಂದು ಅವರು ಹೇಳಿದ್ದಾರೆ.
ಇಂತಹ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು ದೆಹಲಿಯಿಂದ ಹೊರಗೆ ಮತ್ತು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
|