ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭದ್ರತಾ ಕಾನೂನುಗಳನ್ನು ಬಲಗೊಳಿಸಲು ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭದ್ರತಾ ಕಾನೂನುಗಳನ್ನು ಬಲಗೊಳಿಸಲು ನಿರ್ಧಾರ
ನವದೆಹಲಿ: ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಲು ಗೃಹಸಚಿವಾಲಯ ನೀಡಿರುವ ಶಿಫಾರಸ್ಸುಗಳನ್ನು ಸ್ವೀಕರಿಸುವುದರೊಂದಿಗೆ, ಆಂತರಿಕ ಭದ್ರತೆಯ ಕುರಿತಂತೆ ಬುಧವಾರ ಕರೆಯಲಾಗಿದ್ದ ವಿಶೇಷ ಸಂಪುಟ ಸಭೆ ಅಂತ್ಯಗೊಂಡಿತು. ಅಲ್ಲದೆ, ರಾಷ್ಟ್ರದಲ್ಲಿರುವ ಭಯೋತ್ಪಾದನಾ ವಿರೋಧಿ ಕಾನೂನುಗಳ ಪುನರ್ವಿಮರ್ಶೆಗಾಗಿ ಸಮಿತಿಯೊಂದನ್ನು ರೂಪಿಸಲೂ ನಿರ್ಧರಿಸಲಾಯಿತು.

ಪ್ರಧಾನಿ ಮನಮೋಹನ್ ಸಿಂಗ್ ಕರೆದಿದ್ದ ಈ ಸಭೆಯು ಸುಮಾರು ಮೂರುಗಂಟೆಗಳ ಕಾಲ ನಡೆದಿದ್ದು, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸಭೆಯ ವಿವರಗಳನ್ನು ಸುದ್ದಿಗಾರರಿಗೆ ತಿಳಿಸಿದರಾದರೂ, ಬಹು ನಿರೀಕ್ಷಿತ ಹೊಸ ಆಂತರಿಕ ಭದ್ರತಾ ಖಾತೆಯ ಕುರಿತು ಯಾವುದೇ ವಿವರಣೆ ನೀಡಲಿಲ್ಲ.

"ಗೃಹಸಚಿವ ಶಿವರಾಜ್ ಪಾಟೀಲ್ ಅವರು ಕೇಂದ್ರ ಸಂಪುಟಕ್ಕೆ ವಿವರಗಳನ್ನು ನೀಡಿದರು. ಅವರು ಭದ್ರತಾ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ. ಈ ಕ್ರಮಗಳಿಗೆ ಸಂಪುಟದ ಅಂಗೀಕಾರ ನೀಡಲಾಯಿತು" ಎಂದಷ್ಟೆ ನುಡಿದ ಪ್ರಣಬ್ ಈ ಕುರಿತು ಹೆಚ್ಚಿನ ವಿವರ ನೀಡಲಿಲ್ಲ.
ಗುಪ್ತಚರ ಜಾಲವನ್ನು ಬಲಗೊಳಿಸುವುದು, ನೀತಿ ಸಾಮರ್ಥ್ಯಗಳನ್ನು ವಿಸ್ತರಿಸುವುದು ಮತ್ತು ಪೊಲೀಸ್ ಪಡೆಗಳ ಆಧುನೀಕರಣಗಳ ಕುರಿತು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಪ್ರಧಾನಿ ಸಂಪುಟ ಸಭೆ ಕರೆದಿದ್ದರು. ಸಂಪುಟ ಸಭೆಯಲ್ಲಿ ಗೃಹ ಸಚಿವಾಲಯ ಕಾರ್ಯಕ್ಷಮತೆಯ ಕುರಿತು ಟೀಕಾತ್ಮಕ ಪರಿಶೀಲನೆ ನಡೆಸಲಾಯಿತು.

ಲಾಲೂ ಗೈರು
ಬುಧವಾರದ ಸಂಪುಟ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅವರು ಸೋಮವಾರ, ಉಗ್ರವಾದವನ್ನು ತಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.

ಪ್ರಸ್ತುತವಿರುವ ಭಯೋತ್ಪಾದನಾ ವಿರೋಧಿ ಕಾನೂನನ್ನು ಇನ್ನಷ್ಟು ಶಕ್ತಗೊಳಿಸಲು ಸರಕಾರವು ಕ್ರಿಯಾತ್ಮಕವಾಗಿ ಪರಿಗಣಿಸುತ್ತಿದೆ ಎಂದು ಪ್ರಧಾನಿ ಘೋಷಿಸಿದ್ದರು.

ಮತ್ತಷ್ಟು
ರಾಷ್ಟ್ರಪತಿಗಳಿಂದ ನಿರ್ಮಲ ಗ್ರಾಮ ಪುರಸ್ಕಾರ
ಸ್ಫೋಟ-ನನ್ನ ಮಗ ಅಮಾಯಕ: ಜುಬೈದಾ
ಸ್ಫೋಟಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ:ಪಿಎಂ
ದೆಹಲಿ ಬ್ಲಾಸ್ಟ್ ತನಿಖೆಯಲ್ಲಿ ಪ್ರಗತಿ: ಬೆರಳಚ್ಚು ಹೋಲಿಕೆ
ಶ್ರೀನಗರ: ಉಗ್ರರಿಂದ ಗ್ರೆನೇಡ್ ದಾಳಿ: 15 ಮಂದಿಗೆ ಗಾಯ
ಕಾಶ್ಮೀರದಲ್ಲಿ ಯುದ್ಧವಿಮಾನ ನಿಯೋಜನೆ