ದೆಹಲಿಯಲ್ಲಿ ನಡೆಸಲಾಗಿರುವ ಸರಣಿ ಸ್ಫೋಟ ಕೃತ್ಯದ ತನಿಖೆಗಾಗಿ ಅಹಮದಾಬಾದ್ ಸ್ಫೋಟಗಳ ರೂವಾರಿ ಮುಫ್ತಿ ಅಬು ಬಶೀರ್‌ನನ್ನು ದೆಹಲಿಗೆ ಕರೆದೊಯ್ಯಲಾಗಿದೆ.
ಉತ್ತರ ಪ್ರದೇಶದವನಾಗಿರುವ ಬಶೀರ್ ತನಿಖೆಯ ವೇಳೆಗೆ ತಾನು ಜುಲೈ 24ರಿಂದ 27ರ ತನಕ ದೆಹಲಿಯ ಎರಡು ಕಡೆಗಳಲ್ಲಿ ನೆಲೆಸಿರುವುದಾಗಿ ಹೇಳಿದ್ದಾನೆ.
ಬಶೀರ್‌ನ ಸಹೋದರ ಅಬು ಜಾರ್ ಹಳೆದೆಹಲಿಯಲ್ಲಿ ಪಾರ್ಕಿಂಗ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರೆ, ಆತನ ಇನ್ನಿಬ್ಬರು ಪರಿಚಯಸ್ಥರಾದ ಡೇನಿಶ್ ಮತ್ತು ಅಫ್ತಾಬ್ ದಕ್ಷಿಣ ದೆಹಲಿಯಲ್ಲಿ ನೆಲೆಸಿದ್ದಾರೆ.
ಬಶೀರ್‌ನ ತನಿಖೆಯ ಬಳಿಕ, ಪೊಲೀಸರು ಇಂದೋರ್‌ನಲ್ಲಿ ಮಾರ್ಚ್ ತಿಂಗಳಲ್ಲಿ ಬಂಧನಕ್ಕೀಡಾಗಿರುವ ಸಫ್ದರ್ ನಾಗೋರಿಯ ವಿಚಾರಣೆ ನಡೆಸಬಹುದು ಎಂದು ಊಹಿಸಲಾಗಿದೆ.
|