ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 13ರ ಬಾಲಕಿಯನ್ನು ಸುಟ್ಟುಹಾಕಿದ ಸಹಪಾಟಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
13ರ ಬಾಲಕಿಯನ್ನು ಸುಟ್ಟುಹಾಕಿದ ಸಹಪಾಟಿಗಳು
ಮಧ್ಯಪ್ರದೇಶದ ಬಾಮ್‌ತಾರ ಎಂಬ ಹಳ್ಳಿಯೊಂದರಲ್ಲಿ 13ರ ಹರೆಯದ ಬಾಲಕಿಯೊಬ್ಬಳನ್ನು ಆಕೆಯ ಮೂವರು ಸಹಪಾಟಿಗಳು ಜೀವಂತ ಸುಟ್ಟುಹಾಕಿದ ಆಘಾತಕಾರಿ ಘಟನೆ ಸಂಭವಿಸಿದೆ.

ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ವಿದಿಶ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಗುರುವಾರ ಮುಂಜಾನೆ ಆಕೆ ಸಾವನ್ನಪ್ಪಿದಳು.

ಆಕೆ ತನ್ನ ಮರಣಕಾಲದ ಹೇಳಿಕೆಯಲ್ಲಿ ಮೂವರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಇವರಲ್ಲಿ ಎರಡು ಹುಡುಗಿಯರು ಆಕೆಯ ತರಗತಿಯವರಾಗಿದ್ದರೆ, ಮೂರನೆಯವಳು ಆಕೆಯ ಹಿರಿಯ ವಿದ್ಯಾರ್ಥಿನಿಯಾಗಿದ್ದಾಳೆ.

ಹೆಚ್ಚಿನ ವಿಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು
ಭಯಪಡುವ ಅಗತ್ಯವಿಲ್ಲ: ಚಿದಂಬರಂ ಭರವಸೆ
ಅಹಮದಾಬಾದ್ ಸ್ಫೋಟ ರೂವಾರಿ ಅಬು ಬಶೀರ್ ದೆಹಲಿಗೆ
ಭದ್ರತಾ ಕಾನೂನುಗಳನ್ನು ಬಲಗೊಳಿಸಲು ನಿರ್ಧಾರ
ರಾಷ್ಟ್ರಪತಿಗಳಿಂದ ನಿರ್ಮಲ ಗ್ರಾಮ ಪುರಸ್ಕಾರ
ಸ್ಫೋಟ-ನನ್ನ ಮಗ ಅಮಾಯಕ: ಜುಬೈದಾ
ಸ್ಫೋಟಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ:ಪಿಎಂ