ಮಸಿತ್‌ಮರಾಹಿ ಜಿಲ್ಲೆಯಲ್ಲಿ ಮೊನ್ನೆ ರಾತ್ರಿ ಚಾಲಕನ ಅಚಾತುರ್ಯದ ಚಾಲನೆಯಿಂದಾಗಿ 16 ಜನರ ಸಾವಿಗೆ ಕಾರಣವಾದ ಬಸ್ ಪರ್ಮಿಟ್ ರದ್ದುಗೊಳಿಸುವಂತೆ ಬಿಹಾರ ಸರಕಾರ ಆದೇಶ ನೀಡಿದೆ. ಆ ನಿಟ್ಟಿನಲ್ಲಿ ಸರಕಾರ ನಿನ್ನೆ ಈ ಕುರಿತು ಆದೇಶವನ್ನು ಜಾರಿಗೊಳಿಸಿದೆ.
ಬಿಆರ್-06ಜ-3925 ಎಂಬ ನಂಬರಿನ ಬಸ್ ಪರವಾನಗಿಯನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ನಡೆದ ಅಪಘಾತವು ಒಟ್ಟು 16 ಜನರ ಸಾವಿಗೆ ಕಾರಣವಾಗಿತ್ತೆಂದು ಅವರು ಹೇಳಿದ್ದಾರೆ.
ಬಸ್ಸಿನ ಚಾಲಕನ ಮೇಲೆ ಈ ಕುರಿತು ಕೇಸು ದಾಖಲಿಸುವಂತೆ ಮುಜಾಫರಾಬಾದ್ ಉಪ ಸಾರಿಗೆ ಕಮಿಷನರ್‌ಗೆ ಭೂಷಣ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಮತ್ತು ಕೊಲೆಗಡುಕ ಬಸ್ ಇನ್ನು ಮುಂದೆ ರಾಜ್ಯದ ರಸ್ತೆಗಳಲ್ಲಿ ಓಡಾಡದಂತೆ ತಡೆಯಬೇಕೆಂದು ಭೂಷಣ್ ಆಗ್ರಹಿಸಿದ್ದಾರೆ.
ಮೊನ್ನೆ ರಾತ್ರಿ ತಂಡ್ಸಾಪುರ್-ರೂಪೌಲಿ ಗ್ರಾಮದ, ರಸ್ತೆ ಬದಿಯಲ್ಲಿ ಟಿ.ವಿ. ವೀಕ್ಷಿಸುತ್ತಿದ್ದ ಜನರ ಮೇಲೆ ಬಸ್ ಅಚಾನಕ್ಕಾಗಿ ನುಗ್ಗಿದ್ದು 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.
|