ನಂಬಿದರೆ ನಂಬಿ ಬಿಟ್ಟರೆ ಬಿಡಿ ಹೀಗೊಂದು ಸುದ್ದಿಯುಂಟು! ಸುದ್ದಿ ಏನಪಾ ಅಂದ್ರೆ ಕೋಳಿ ಮೊಟ್ಟೆಯೊಳಗಿಂದ ಹಾವಿನ ಮರಿ ಹೊರಬಂತಂತೆ! ವಿಚಿತ್ರವಾದರೂ ನಿಜ. ಇದು ನಡೆದಿರುವುದು ಬಿಹಾರದ ಸಮಸ್ಟಿಪುರ ಎಂಬ ಜಿಲ್ಲೆಯಲ್ಲಿ.
ಅಂಗಾರಘಾಟ್ ಪೊಲೀಸ್ ಠಾಣಾವ್ಯಾಪ್ತಿಯ ಸಮ್ತು ಗ್ರಾಮದ ಕಿಶೋರ್ ಜಗದೀಶ್ ಕುಮಾರ್ ಅವರು ತನ್ನ ಹಳ್ಳಿಯವನೇ ಆದ ಬಹಾದೂರ್ ರಾಮ್ ಎಂಬವರ ಮನೆಯಿಂದ ಕೋಳಿ ಮೊಟ್ಟೆ ಖರೀದಿಸಿ ತಂದರು. ಆಮ್ಲೇಟೊಂದನ್ನು ಕಾಯಿಸಿ, ಒಸಿ ಬಾಯಿಹುಳ್ಳಗೆ ಮಾಡಿಕೊಂಡು ಊಟಮಾಡೋಣ ಎಂಬ ಉದ್ದೇಶದಿಂದ, ಈರುಳ್ಳಿ, ಹಸಿಮೆಣಸು ಕತ್ತರಿಸಿ, ಒಲೆ ಮೇಲೆ ಕಾವಲಿ ಇರಿಸಿ, ಮೊಟ್ಟೆ ಒಡೆದು ಮಿಶ್ರಮಾಡ ಹೊರಟಾಗ, ಮೊಟ್ಟೊಯೊಳಗಿಂದ ಲೋಳೆ ಸುರಿಯುವ ಬದಲಿಗೆ ನಾಲ್ಕೈದು ಇಂಚು ಉದ್ದದ ಹಾವಿನ ಮರಿಯೊಂದು ಬಳಕುತ್ತಾ ಬಂತಂತೆ! ಹೇಗಾಗಿರ ಬೇಡ ಕಿಶೋರ್ ಕುಮಾರ್‌ಗೆ. ಸಣ್ಣ ಮಟ್ಟದಲ್ಲಿ ಕೋಳಿ ಸಾಕಣೆ ಮಾಡುತ್ತಿರುವ ಬಹಾದೂರ್‌ಗೆ ಕಿಶೋರ್ ವಿಷಯ ತಿಳಿಸಿದರು. ಅವರು ತನ್ನ ಕೋಳಿಯನ್ನು ಜಾಗರೂಕತೆಯಿಂದ ವೀಕ್ಷಿಸಿ, ಅಂದು ಅದು ಇರಿಸಿದ್ದ ಮೊಟ್ಟೆಯನ್ನು ಹೊರತೆಗೆದು ಒಡೆದು ನೋಡಿದರೆ ಏನಾಶ್ಚರ್ಯ? ಇದರಿಂದಲೂ ಸುಮಾರು ಎರಡೂವರೆ ಇಂಚಿನ ಹಾವಿನ ಮರಿ ಹೊರಬಂತಂತೆ!
ಕೋಳಿ ಮೊಟ್ಟೆಯಿಂದ ಹಾವಿನಮರಿ ಹೊರಬಂದಿರುವ ಸುದ್ದಿ ತಿಳಿದ ಪಶುವೈದ್ಯರು, ಪಶುಸಂಗೋಪನಾ ಅಧಿಕಾರಿ ಡಾ| ಅಜಯ್ ಕುಮಾರ್ ಅವರೊಂದಿಗೆ ಬಹಾದೂರ್ ರಾಮನ ಮನೆಗೆ ತೆರಳಿ ಸಂಶೋಧನಾ ದೃಷ್ಟಿಯಿಂದ ಪರಿಶೀಲನೆ ನಡೆಸಿದರು.
ಈ ತಂಡವು ಹಾವಿನ ಮರಿಇರುವ ಮೊಟ್ಟೆ ಇರಿಸಿದ ಕೋಳಿ, ಮೊಟ್ಚೆಯಿಂದ ಹೊರ ಬಂದ ಹಾವಿನ ಮರಿ ಮತ್ತು ಮೊಟ್ಟೆಯ ಕವಚವನ್ನು ಅಧ್ಯಯನಕ್ಕಾಗಿ ಕೊಂಡೊಯ್ದಿದ್ದಾರೆ.
ಕೋಳಿ ಮೊಟ್ಟೆಯೊಳಗೆ ಹಾವಿನ ಮರಿ ನಂಬಲಸಾಧ್ಯ ಮತ್ತು ವಿಚಿತ್ರ ಎಂದು ಡಾ| ಅಜಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮೊಟ್ಟೆಯೊಳಗೆ ಹಾವಿನ ಮರಿ ಪತ್ತೆಯಾಗಿರುವ ಸುದ್ದಿ ಊರೆಲ್ಲ ಹರಡಿದ್ದು, ಜನರೀಗ ಮೊಟ್ಟೆ ಖರೀದಿಸಲು ಭಯಪಡುತ್ತಿದ್ದು, ಮೊಟ್ಟೆ ವ್ಯಾಪರಕ್ಕೆ ಧಕ್ಕೆಯುಂಟಾಗಿದೆ.
ಕಿಶೋರ್ ಕುಮಾರ್ ಆಮ್ಲೇಟ್ ಮಾಡ ಹೊರಟಿದ್ದರು. ಬಾಯ್‌ಲ್ಡ್ ಎಗ್ ಆಗಿದ್ದರೆ........
|