ದಕ್ಷಿಣ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ದೆಹಲಿ ಪೊಲೀಸರು ಮತ್ತು ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಉಗ್ರರಿಬ್ಬರು ಹತರಾಗಿದ್ದು, ಪೊಲೀಸ್ ಸಿಬ್ಬಂದಿಗಳಿಬ್ಬರು ಗಾಯಗೊಂಡಿದ್ದಾರೆ. ಇಬ್ಬರು ಉಗ್ರರನ್ನು ಈ ವೇಳೆ ಬಂಧಿಸಲಾಗಿದೆ.
ಹೆಚ್ಚುವರಿಯಾಗಿ ಎನ್‌ಕೌಂಟರ್ ಸ್ಥಳದಲ್ಲಿ ರಾಷ್ಟ್ರೀಯ ಭದ್ರತಾ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಜಾಮಿಯಾ ನಗರದ ಬಟ್ಲಾ ಹೌಸ್‌ನಲ್ಲಿ ಮೂವರು ಉಗ್ರರು ಅಡಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಹಮದಾಬಾದ್ ಬಾಂಬ್ ಸ್ಫೋಟ ರೂವಾರಿ ಮುಫ್ತಿ ಅಬು ಬಶೀರ್ ನೀಡಿರುವ ಮಾಹಿತಿಯನ್ವಯ ದೆಹಲಿ ಪೊಲೀಸ್ ವಿಶೇಷ ಘಟಕವು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಈ ಪ್ರದೇಶವನ್ನು ಸಂಪೂರ್ಣ ವಶಪಡಿಸಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಪೊಲೀಸ್ ಮುಖ್ಯಕಚೇರಿಯನ್ನು ತಲುಪಿದ್ದಾರೆ.
ದಕ್ಷಿಣ ದೆಹಲಿಯ ಜಾಮಿಯಾ ನಗರವು ನ್ಯೂ ಫ್ರೆಂಡ್ಸ್ ಕಾಲೋನಿಗೆ ಸಮೀಪವಾಗಿದೆ.
ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬಶೀರ್‌ನನ್ನು ಗುರುವಾರ ದೆಹಲಿಗೆ ಕರೆತರಲಾಗಿತ್ತು. ಆತ ದೆಹಲಿ ಸ್ಫೋಟದ ಬಗ್ಗೆ ತನಗೆ ತಿಳಿದಿತ್ತು ಎಂದು ಹೇಳಿದ್ದರೂ, ಯಾವ ಸಮಯದಲ್ಲಿ ಇದನ್ನು ನಡೆಸುತ್ತಾರೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆನ್ನಲಾಗಿದೆ. ಈ ಸ್ಫೋಟದಲ್ಲಿ 24 ಮಂದಿ ಹತರಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಲೀಲಾ ಮಸೀದಿಯ ಪಕ್ಕದಲ್ಲಿರುವ ನಂ ಎಲ್-18, ಬಟಾಲ ಹೌಸ್‌ನಲ್ಲಿ ಉಗ್ರರು ಅಡಗಿದ್ದು, ಗುಂಡೇಟಿಗೆ ಬಲಿಯಾದ ಉಗ್ರರ ಮೃತದೇಹವನ್ನು ಹೊರತರಲಾಗಿದೆ ಎಂದು ವರದಿ ತಿಳಿಸಿದೆ.
|