ಮಹಾನದಿಯಿಂದ ರಭಸದಲ್ಲಿ ಹರಿಯುತ್ತಿರುವ ನೀರು ತಗ್ಗು ಪ್ರದೇಶಗಳಿಗೆ ಹರಿಯುತ್ತಿದ್ದು, ಒರಿಸ್ಸಾದಲ್ಲಿ ಪ್ರವಾಹಸ್ಥಿತಿ ಗಂಭೀರವಾಗಿದ್ದು, ಇದುವರೆಗೆ ಒಂಭತ್ತು ಮಂದಿ ಜೀವಕಳೆದುಕೊಂಡಿದ್ದಾರೆ.
ರಾಜ್ಯ ಸರಕಾರವು ನಾಲ್ಕು ಕರಾವಳಿ ಜಿಲ್ಲೆಗಳಾದ ಕಟಕ್, ಜಗತ್‌ಸಿಂಗ್‌ಪುರ ಮತ್ತು ಪುರಿಯಲ್ಲಿ ಕಟ್ಟೆಚ್ಚರ ವಹಿಸಿದೆ.
ಭಾರೀ ಪ್ರಮಾಣದಲ್ಲಿ ಸ್ಥಳಾಂತರ ಪ್ರಕ್ರಿಯೆ ಆರಂಭಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.
ಹಿರಾಕುಡ್ ಜಲಾಶಯದಲ್ಲಿ ನೀರಿನ ಮಟ್ಚವು, 630 ಅಡಿಗಳ ಸಂಪೂರ್ಣ ಸಾಮರ್ಥ್ಯವನ್ನು ತಲುಪಿರುವ ಕಾರಣ, ಅಣೆಕಟ್ಟಿನ 26 ಗೇಟುಗಳನ್ನು ತೆರೆಯಲಾಗಿದೆ.
ಇಂದು ಮುಂಜಾನೆ ಜಲಾಶಯಕ್ಕೆ 4.6ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದಿದ್ದು, ಅಷ್ಟೇಪ್ರಮಾಣದ ನೀರನ್ನು ಹೊರಬಿಡಲಾಗಿದೆ.
|