ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ
ಇಲ್ಲಿನ ತ್ವರಿತಗತಿ ನ್ಯಾಯಾಲಯ ಪಪಿಯಾ ಘೋಷ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಶಂಕರ್ ಷಾಗೆ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಲ್ಲದೇ ಪ್ರಕರಣದ ಉಳಿದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು,ತಲಾ 5ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಗುರುವಾರದಂದು ಘೋಷ್ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಕೀಲ ರಾಮ್ ಚಂದೆರ್ ಮಹಾತೋ ಸೇರಿದಂತೆ ಐದು ಮಂದಿಯನ್ನು ದೋಷಿ ಎಂದು ತೀರ್ಪು ನೀಡಿ,ಶುಕ್ರವಾರ ಶಿಕ್ಷೆಯ ಸ್ವರೂಪ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತ್ತು.

ಪಾಟ್ನಾ ಮಹಿಳಾ ಕಾಲೇಜಿನ ಇತಿಹಾಸ ಪ್ರೊಫೆಸರ್ ಆಗಿದ್ದ ಪಪಿಯಾ ಘೋಷ್ ಹಾಗೂ ಆಕೆಯ ಮನೆಗೆಲಸದ ಮಾಲ್ತಿಯನ್ನು 2006ರ ಡಿಸೆಂಬರ್‌ನಲ್ಲಿ ಹತ್ಯೆಗೈಯಲಾಗಿತ್ತು.
ಮತ್ತಷ್ಟು
ವಾಲ್‌ಸ್ಟ್ರೀಟ್ ಕುಸಿತ: ಇನ್ನೋರ್ವ ದಲ್ಲಾಳಿ ಆತ್ಮಹತ್ಯೆ
ಒರಿಸ್ಸಾ ನೆರೆ ಪರಿಸ್ಥಿತಿ ಗಂಭೀರ, ಸ್ಥಳಾಂತರ ಆರಂಭ
ದಕ್ಷಿಣ ದೆಹಲಿಯಲ್ಲಿ ಎನ್‌ಕೌಂಟರ್: 2 ಉಗ್ರರ ಬಲಿ
ಕೋಳಿ ಮೊಟ್ಟೆಯೊಳಗೆ ಹಾವಿನ ಮರಿ!
ಕರ್ನಾಟಕ, ಒರಿಸ್ಸಾಗಳಿಗೆ ಕೇಂದ್ರದ ಎಚ್ಚರಿಕೆ
ಬಿಹಾರ: ಬಸ್ ಪರ್ಮಿಷನ್ ರದ್ದು