ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎನ್‌‌ಕೌಂಟರ್: ಗಾಯಾಳು ಇನ್ಸ್‌ಪೆಕ್ಟರ್ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌‌ಕೌಂಟರ್: ಗಾಯಾಳು ಇನ್ಸ್‌ಪೆಕ್ಟರ್ ಸಾವು
ಇಲ್ಲಿನ ಜಾಮಿಯಾನಗರ ಗಲ್ಲಿಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್ ಘಟನೆಯಲ್ಲಿ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್ ಮೋಹನ್ ಚಾಂದ್ ಶರ್ಮಾ ಅವರು ರಾಜಧಾನಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ದೆಹಲಿಯ ಜಾಮಿಯಾ ಪ್ರದೇಶದ ಗಲ್ಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರೊಂದಿಗೆ ಇಂದು ಬೆಳಿಗ್ಗೆ ಪೊಲೀಸರು ನಡೆಸಿದ ಕಾಳಗದ ಸಂದರ್ಭದಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದು,ಇಬ್ಬರು ಪರಾರಿಯಾಗಿದ್ದರು. ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದರು,ಇವರೆಲ್ಲ ಹುಜಿ ಸಂಘಟನೆಯ ಉಗ್ರರು ಎಂದು ಶಂಕಿಸಲಾಗಿದೆ.

ಎನ್‌ಕೌಂಟರ್ ಸಂದರ್ಭದಲ್ಲಿ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಸಂಜೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಪಡೆಯಲ್ಲಿ ಶರ್ಮಾ ಅವರು ತುಂಬಾ ಧೈರ್ಯಶಾಲಿಯಾಗಿದ್ದು, ಅವರು ಆರು ಶೌರ್ಯ ಪ್ರಶಸ್ತಿಯನ್ನು ಪಡೆದ ಅಧಿಕಾರಿಯಾಗಿದ್ದರು ಎಂದು ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ವೈ.ಎಸ್.ದಾಡ್ವಾಲ್ ತಿಳಿಸಿದ್ದಾರೆ.

ಕುಖ್ಯಾತ ಭಯೋತ್ಪಾದಕ, ಬೆಂಗಳೂರು, ಅಹಮದಾಬಾದ್,ದೆಹಲಿ ಸ್ಫೋಟಗಳ ರೂವಾರಿ ಅಬು ಬಶೀರ್‌ನನ್ನು ತನಿಖೆಗೊಳಪಡಿಸಿದ ಸಂದರ್ಭದಲ್ಲಿ ದೆಹಲಿಯ ಮೂರು ಸ್ಥಳಗಳಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಕುರಿತು ಮಾಹಿತಿ ನೀಡಿದ್ದ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜಾಮಿಯಾ ನಗರದಲ್ಲಿದ್ದ ಬಹುಮಹಡಿಯನ್ನು ಸುತ್ತುವರಿದ ಸಂದರ್ಭ ಒಳಗೆ ಅಡಗಿ ಕುಳಿತಿದ್ದ ಭಯೋತ್ಪಾದಕರು ಪೊಲೀಸರತ್ತ ಗುಂಡು ಹಾರಿಸಿದ್ದರು.ಈ ಸಂದರ್ಭದಲ್ಲಿ ಗುಂಡಿನ ಚಕಮಕಿಯಲ್ಲಿ ಶರ್ಮಾ ಗಾಯಗೊಂಡಿದ್ದರು.
ಮತ್ತಷ್ಟು
ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ
ವಾಲ್‌ಸ್ಟ್ರೀಟ್ ಕುಸಿತ: ಇನ್ನೋರ್ವ ದಲ್ಲಾಳಿ ಆತ್ಮಹತ್ಯೆ
ಒರಿಸ್ಸಾ ನೆರೆ ಪರಿಸ್ಥಿತಿ ಗಂಭೀರ, ಸ್ಥಳಾಂತರ ಆರಂಭ
ದಕ್ಷಿಣ ದೆಹಲಿಯಲ್ಲಿ ಎನ್‌ಕೌಂಟರ್: 2 ಉಗ್ರರ ಬಲಿ
ಕೋಳಿ ಮೊಟ್ಟೆಯೊಳಗೆ ಹಾವಿನ ಮರಿ!
ಕರ್ನಾಟಕ, ಒರಿಸ್ಸಾಗಳಿಗೆ ಕೇಂದ್ರದ ಎಚ್ಚರಿಕೆ