ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸ್ಫೋಟ: ಬಂಧಿತ ಉಗ್ರನಿಂದ ತಪ್ಪೊಪ್ಪಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸ್ಫೋಟ: ಬಂಧಿತ ಉಗ್ರನಿಂದ ತಪ್ಪೊಪ್ಪಿಗೆ
ಶುಕ್ರವಾರ ದಕ್ಷಿಣ ದೆಹಲಿಯಲ್ಲಿ ನಡೆದ ಎನ್‌ಕೌಂಟರ್ ವೇಳೆ ಬಂಧನಕ್ಕೀಡಾಗಿರುವ ಉಗ್ರ ಸೈಫ್, ದೆಹಲಿ ಸರಣಿಸ್ಫೋಟದಲ್ಲಿ ತನ್ನ ಪಾತ್ರದ ಕುರಿತು ತಪ್ಪೊಪ್ಪಿಕೊಂಡಿದ್ದು ಸ್ಫೋಟಕ್ಕೆ ಸಂಬಂಧಿದಂತೆ ದೆಹಲಿ ಪೊಲೀಸರು ಮಹತ್ವದ ಸುಳಿವು ಪಡೆದಂತಾಗಿದೆ.

ಅಟಿಫ್ ಎಂಬಾತ ಸ್ಫೋಟದ ರೂವಾರಿ ಎಂಬ ಅಂಶವನ್ನು ಸೈಫ್ ತಿಳಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಇತರ ಹತ್ತು ಮಂದಿಯೊಡನೆ ತಾನು ದೆಹಲಿಯಲ್ಲಿ ಬಾಂಬ್‌ಗಳನ್ನು ಇರಿಸಿರುವುದಾಗಿ ಸೈಫ್ ಹೇಳಿದ್ದಾನೆ. ಇನ್ನೋರ್ವ ಶಂಕಿತ ಝೀಶಾನ್ ಎಂಬಾತನೂ ತಾನು ಬಾಂಬ್‌ಗಳನ್ನು ಇರಿಸಿರುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾನೆ.

ಬಾಂಬ್ ಇರಿಸಿರುವ ಕನಿಷ್ಠ ಹತ್ತು ಮಂದಿ ಹಾಗೂ ಎನ್‌ಕೌಂಟರ್ ವೇಳೆ ತಪ್ಪಿಸಿಕೊಂಡಿರುವ ಇತರ ಇಬ್ಬರ ಕುರಿತೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸೈಫ್ ಮತ್ತು ಝೀಶಾನ್ ದೆಹಲಿಯಲ್ಲಿ ಬಾಂಬ್‌ಗಳನ್ನು ಇರಿಸಿದ್ದಾರೆ. ಬಶರ್ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಮತ್ತು ಈತ ಜಿಕೆ ಮಾರುಕಟ್ಟೆಯಲ್ಲಿ ಬಾಂಬ್‌ಗಳನ್ನು ಇರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಉಗ್ರರು ಎನ್‌ಕೌಂಟರ್ ವೇಳೆ ಹತರಾಗಿದ್ದರೆ, ಇತರ ಇಬ್ಬರು ಪರಾರಿಯಾಗಿದ್ದಾರೆ. ದಕ್ಷಿಣ ದೆಹಲಿಯಲ್ಲಿ ನಡೆಸಲಾದ ಎನ್‌ಕೌಂಟರ್ ವೇಳೆಗಿದ್ದ ಐವರು ಉಗ್ರರು ಉತ್ತರ ಪ್ರದೇಶದ ಅಜಮ್‌ಗಢದವರು ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ ಸೈಫ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಆತನ ತಂದೆ, ಪ್ರಕರಣದ ಕುರಿತು ಸೂಕ್ತವಾದ ತನಿಖೆಯಾಗಲಿ. ಒಂದೊಮ್ಮೆ ತನ್ನ ಮಗ ತಪ್ಪಿತಸ್ಥನೆಂದು ಕಂಡು ಬಂದಲ್ಲಿ ಆತನಿಗೆ ಸರಿಯಾದ ಶಿಕ್ಷೆಯಾಗಲಿ ಎಂದಿದ್ದಾರೆ.
ಮತ್ತಷ್ಟು
ಶಂಕಿತ ಉಗ್ರರ ವಿರುದ್ಧ ಅಪರಾಧ ದಾಖಲೆಗಳಿಲ್ಲ: ಯುಪಿ ಪೊಲೀಸ್
93 ಬ್ಲಾಸ್ಟ್: ರುಬೀನಾ ಜಾಮೀನು ತಿರಸ್ಕೃತ
ಎನ್‌‌ಕೌಂಟರ್: ಗಾಯಾಳು ಇನ್ಸ್‌ಪೆಕ್ಟರ್ ಸಾವು
ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ
ವಾಲ್‌ಸ್ಟ್ರೀಟ್ ಕುಸಿತ: ಇನ್ನೋರ್ವ ದಲ್ಲಾಳಿ ಆತ್ಮಹತ್ಯೆ
ಒರಿಸ್ಸಾ ನೆರೆ ಪರಿಸ್ಥಿತಿ ಗಂಭೀರ, ಸ್ಥಳಾಂತರ ಆರಂಭ