ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೆಚ್ಚೆದೆಯ ಅಧಿಕಾರಿಗೆ ರಾಷ್ಟ್ರದ ನಮನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಚ್ಚೆದೆಯ ಅಧಿಕಾರಿಗೆ ರಾಷ್ಟ್ರದ ನಮನ
PTI
ದಕ್ಷಿಣ ದೆಹಲಿಯಲ್ಲಿ ಶುಕ್ರವಾರ ಉಗ್ರರೊಂದಿಗೆ ನಡೆದ ಎನ್‌ಕೌಂಟರ್ ವೇಳೆ ತಗುಲಿರುವ ಗುಂಡೇಟಿನಿಂದಾಗಿ ಸಾವನ್ನಪ್ಪಿರುವ 43ರ ಹರೆಯದ ಮೋಹನ್ ಚಂದ್ ಶರ್ಮಾ ಅವರ ಕುಟುಂಬದ ದುಃಖದಲ್ಲಿ ರಾಷ್ಟ್ರವು ಭಾಗಿಯಾಗಿದೆ.

ಕೆಚ್ಚೆದೆಯ ಎನ್‌ಕೌಂಟರ್ ವೀರ ಮೋಹನ್ ಚಂದ್ ಅವರ 76ನೆ ಎನ್‌ಕೌಂಟರ್ ಇದಾಗಿದೆ. ನಾಲ್ಕುಬಾರಿ ಏಟು ತಗಲಿದ ಇವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸೇರಿಸಲಾದರೂ ಅಲ್ಲಿ ಅವರು ಕೊನೆಯುಸಿರೆಳೆದರು.

"ಧೀರ ಇನ್ಸ್‌ಪೆಕ್ಟರ್ ಅವರನ್ನು ಅಭಿನಂದಿಸಲು ತಾನಿಲ್ಲಿಗೆ ಬಂದೆ. ಆದರೆ ನಾನು ಅಂತಿಮ ನಮನ ಸಲ್ಲಿಸಬೇಕಾಗುತ್ತದೆಂದು ತನಗೆ ತಿಳಿದಿರಲಿಲ್ಲ" ಎಂದು ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ದುಃಖ ವ್ಯಕ್ತಪಡಿಸಿದ್ದಾರೆ.

ಅವರ 19 ವರ್ಷಗಳ ಸೇವೆಯಲ್ಲಿ ಅವರು ಇದುವರೆಗೆ 35 ಉಗ್ರರನ್ನು ಕೊಂದಿದ್ದಾರಲ್ಲದೆ, ಇತರ 80 ಮಂದಿಯನ್ನು ಬಂಧಿಸಿದ್ದಾರೆ.

ವಿಶೇಷ ಪಡೆಯನ್ನು ಭಯೋತ್ಪಾದನಾ ವಿರೋಧಿ ಘಟಕವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸಿಪಿ ರಾಜ್‌ಬೀರ್ ಸಿಂಗ್ ಅವರ ನಿಕಟವರ್ತಿಯಾಗಿದ್ದ ಶರ್ಮಾ ಏಳು ಶೌರ್ಯ ಪ್ರಶಸ್ತಿ ಪಡೆದಿದ್ದಾರೆ.

ಶರ್ಮ ಹುತಾತ್ಮರಾಗಿದ್ದಾರೆ ಎಂದು ಎಂದು ಹೇಳಿರುವ ಗೃಹಸಚಿವ ಶಿವರಾಜ್ ಪಾಟೀಲ್, ಇಡಿ ರಾಷ್ಟ್ರವು ಅವರಿಗೆ ಆಭಾರಿಯಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಪೊಲೀಸ್ ತನ್ನೊಬ್ಬ ಕೆಚ್ಚೆದೆಯ ಅಧಿಕಾರಿಯನ್ನು ಕಳೆದುಕೊಂಡಿದ್ದು, ಶೋಕಾಚರಣೆ ನಡೆಸುತ್ತಿದೆ. ಶರ್ಮಾ ಅವರ ಕುಟುಂಬವು ಆಘಾತಕ್ಕೊಳಗಾಗಿದ್ದು, ಇಡಿಯ ರಾಷ್ಟ್ರವು ಅವರ ದುಃಖದಲ್ಲಿ ಭಾಗಿಯಾಗಿದೆ.

ಕುಖ್ಯಾತ ಭಯೋತ್ಪಾದಕ, ಬೆಂಗಳೂರು, ಅಹಮದಾಬಾದ್, ದೆಹಲಿ ಸ್ಫೋಟಗಳ ರೂವಾರಿ ಅಬು ಬಶೀರ್‌ನನ್ನು ತನಿಖೆಗೊಳಪಡಿಸಿದ ಸಂದರ್ಭದಲ್ಲಿ ದೆಹಲಿಯ ಮೂರು ಸ್ಥಳಗಳಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಕುರಿತು ಮಾಹಿತಿ ನೀಡಿದ್ದ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜಾಮಿಯಾ ನಗರದಲ್ಲಿದ್ದ ಬಹುಮಹಡಿಯನ್ನು ಸುತ್ತುವರಿದ ಸಂದರ್ಭ ಒಳಗೆ ಅಡಗಿ ಕುಳಿತಿದ್ದ ಭಯೋತ್ಪಾದಕರು ಪೊಲೀಸರತ್ತ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿಯಲ್ಲಿ ಶರ್ಮಾ ಗಾಯಗೊಂಡಿದ್ದರು.
ಮತ್ತಷ್ಟು
ವೇತನ ವಿಳಂಬವಾದರೆ ಬಡ್ಡಿ ಸಮೇತ ನೀಡಬೇಕು
ದೆಹಲಿ ಸ್ಫೋಟ: ಬಂಧಿತ ಉಗ್ರನಿಂದ ತಪ್ಪೊಪ್ಪಿಗೆ
ಶಂಕಿತ ಉಗ್ರರ ವಿರುದ್ಧ ಅಪರಾಧ ದಾಖಲೆಗಳಿಲ್ಲ: ಯುಪಿ ಪೊಲೀಸ್
93 ಬ್ಲಾಸ್ಟ್: ರುಬೀನಾ ಜಾಮೀನು ತಿರಸ್ಕೃತ
ಎನ್‌‌ಕೌಂಟರ್: ಗಾಯಾಳು ಇನ್ಸ್‌ಪೆಕ್ಟರ್ ಸಾವು
ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ