ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸ್ಫೋಟಕ್ಕೆ ಕರ್ನಾಟಕದಿಂದ ಸ್ಫೋಟಕ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸ್ಫೋಟಕ್ಕೆ ಕರ್ನಾಟಕದಿಂದ ಸ್ಫೋಟಕ !
ರಾಜಧಾನಿಯಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಸಂಚಿನ ಹಿಂದೆ ನಿಷೇಧಿತ ಸಿಮಿ,ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯೊಂದಿಗೆ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ(ಎಲ್‌ಇಟಿ)ದ ಸಂಪೂರ್ಣ ಬೆಂಬಲ ಇರುವುದಾಗಿ ಶನಿವಾರ ದೆಹಲಿ ಪೊಲೀಸರು ಗಂಭೀರವಾಗಿ ಆರೋಪಿಸಿದ್ದಾರೆ.

ದೆಹಲಿ ಸ್ಫೋಟಕ್ಕೆ ಕರ್ನಾಟಕದಿಂದಲೇ ಸ್ಫೋಟಕ ರವಾನಿಯಾಗಿದೆ ಎಂಬ ಆಘಾತಕಾರಿ ಅಂಶವನ್ನು ಅವರು ಈ ಸಂದರ್ಭದಲ್ಲಿ ಇಲಾಖೆ ಬಹಿರಂಗಪಡಿಸಿದೆ.

ಅಲ್ಲದೇ ದೇಶದ ವಿವಿಧೆಡೆ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅತಿಫ್ ಅಲ್‌ಕೈದಾ ಉಗ್ರಗಾಮಿ ಸಂಘಟನೆಯ ಪ್ರಭಾವಕ್ಕೊಳಗಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ದೆಹಲಿ ಪೊಲೀಸ್ ಜಂಟಿ ಆಯುಕ್ತ ಕರ್ನೈಲ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ದೆಹಲಿ ಸ್ಫೋಟದಲ್ಲಿ ಒಟ್ಟು 13ಮಂದಿ ಉಗ್ರರು ಭಾಗಿಯಾಗಿರುವುದಾಗಿ ಶಂಕಿಸಲಾಗಿದೆ,ಅಲ್ಲದೇ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ಉಗ್ರ ಅತಿಫ್ ಆಲಿಯಾಸ್ ಬಾಶರ್ ಇಂಡಿಯನ್ ಮುಜಾಹಿದ್ದೀನ್‌ನ ಪ್ರಮುಖ ವ್ಯಕ್ತಿಯಾಗಿದ್ದು, ಆತನ ಲ್ಯಾಪ್‌ಟ್ಯಾಪ್‌ನಲ್ಲಿ ಮಹತ್ವದ ಮಾಹಿತಿ ಲಭಿಸಿರುವುದಾಗಿ ಅವರು ಹೇಳಿದರು.

ಆತ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್ ಕೈದಾ ಹಾಗೂ ಅದರ ಸ್ಥಾಪಕ ಒಸಾಮ ಬಿನ್ ಲಾಡೆನ್‌‌ನಿಂದ ತುಂಬಾ ಪ್ರಭಾವಕ್ಕೊಳಗಾಗಿರುವುದಾಗಿಯೂ ತಿಳಿಸಿದರು.

ದೇಶದ ವಿವಿಧೆಡೆ ಸ್ಫೋಟ ನಡೆಸಲು ಈ ಉಗ್ರಗಾಮಿ ಸಂಘಟನೆ ವ್ಯವಸ್ಥಿತ ಸಂಚು ರೂಪಿಸಿದ್ದು,ವಾರಣಾಸಿ ಸ್ಫೋಟದ ಹಿಂದೆ ಸೈಫ್ ಕೈವಾಡ ಇದ್ದಿದ್ದು,ಅಹಮದಾಬಾದ್ ಸ್ಫೋಟಕ್ಕೆ 11ಮಂದಿ ಉಗ್ರರು ತೆರಳಿದ್ದರು.

ಈ ನಿಟ್ಟಿನಲ್ಲಿ ಬಂಧಿತ ಆರೋಪಿಗಳನ್ನು ಗುರುತಿಸಲು ಗುಜರಾತ್, ರಾಜಸ್ಥಾನ್ ಪೊಲೀಸರು ನೆರವು ಕೋರಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಅಸ್ಸಾಂ: ಅನಿಲಸೋರಿಕೆಯಿಂದ ತೈಲಗಳ್ಳರ ಸಾವು
ದೆಹಲಿ ಸ್ಫೋಟ ಶಂಕಿತರು ಪೊಲೀಸರ ವಶಕ್ಕೆ
ಕೆಚ್ಚೆದೆಯ ಅಧಿಕಾರಿಗೆ ರಾಷ್ಟ್ರದ ನಮನ
ವೇತನ ವಿಳಂಬವಾದರೆ ಬಡ್ಡಿ ಸಮೇತ ನೀಡಬೇಕು
ದೆಹಲಿ ಸ್ಫೋಟ: ಬಂಧಿತ ಉಗ್ರನಿಂದ ತಪ್ಪೊಪ್ಪಿಗೆ
ಶಂಕಿತ ಉಗ್ರರ ವಿರುದ್ಧ ಅಪರಾಧ ದಾಖಲೆಗಳಿಲ್ಲ: ಯುಪಿ ಪೊಲೀಸ್