ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸ್ಫೋಟ-ಸೈಫ್ ತಪ್ಪೊಪ್ಪಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸ್ಫೋಟ-ಸೈಫ್ ತಪ್ಪೊಪ್ಪಿಗೆ
ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಶಾಮೀಲಾಗಿರುವುದಾಗಿ ಶುಕ್ರವಾರ ದಕ್ಷಿಣ ದೆಹಲಿಯಲ್ಲಿ ಬಂಧಿತನಾದ ಮೊಹಮ್ಮದ್ ಸೈಫ್ ತಪ್ಪೊಪ್ಪಿಕೊಂಡಿದ್ದಾನೆ.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಮತ್ತು ಸ್ಫೋಟಕ್ಕೆ ಸಂಚು ನಡೆಸಿದವನು ನಿನ್ನೆ ದೆಹಲಿ ಪೊಲೀಸರ ವಿಶೇಷ ಪಡೆ ಜಾಮಿಯಾ ನಗರದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತನಾದ ಅತಿಫ್ ಆಲಿಯಾಸ್ ಬಶೀರ್ ಆಗಿದ್ದಾನೆ ಎಂಬುದನ್ನು ಕೂಡ ಈತ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಅಲ್ಲದೇ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಬ್ದುಲ್ ಸುಬಾನ್ ಆಲಿಯಾಸ್ ತೌಖೀರ್ ಅಲ್ಲ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಅಹಮದಾಬಾದ್,ಬೆಂಗಳೂರು,ಜೈಪುರ,ಹೈದರಾಬಾದ್ ಮತ್ತು ಉತ್ತರಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಅತಿಫ್ ಪ್ರಮುಖ ರೂವಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಜಾಮಿಯಾ ನಗರದ ಬಾಟ್ಲಾ ಮನೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದೆಹಲಿ ಪೊಲೀಸರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರಾದ ಅತಿಫ್ ಮತ್ತು ಫಕ್ರುದ್ದೀನ್ ಆಲಿಯಾಸ್ ಸಾಜಿದ್ ಶರಣಾಗಿದ್ದರು. ಅದೇ ವೇಳೆ ಎನ್‌ಕೌಂಟರ್‌ನಲ್ಲಿ ಸೈಫ್ ಗಾಯಗೊಂಡಿದ್ದು,ಆತನ ಜೊತೆ ಇದ್ದ ಇನ್ನಿಬ್ಬರು ಉಗ್ರರು ಪಲಾಯನ ಮಾಡಿದ್ದರು.
ಮತ್ತಷ್ಟು
ದೆಹಲಿ ಸ್ಫೋಟಕ್ಕೆ ಕರ್ನಾಟಕದಿಂದ ಸ್ಫೋಟಕ !
ಅಸ್ಸಾಂ: ಅನಿಲಸೋರಿಕೆಯಿಂದ ತೈಲಗಳ್ಳರ ಸಾವು
ದೆಹಲಿ ಸ್ಫೋಟ ಶಂಕಿತರು ಪೊಲೀಸರ ವಶಕ್ಕೆ
ಕೆಚ್ಚೆದೆಯ ಅಧಿಕಾರಿಗೆ ರಾಷ್ಟ್ರದ ನಮನ
ವೇತನ ವಿಳಂಬವಾದರೆ ಬಡ್ಡಿ ಸಮೇತ ನೀಡಬೇಕು
ದೆಹಲಿ ಸ್ಫೋಟ: ಬಂಧಿತ ಉಗ್ರನಿಂದ ತಪ್ಪೊಪ್ಪಿಗೆ