ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸ್ಫೋಟ: ಮತ್ತೆ 3ಉಗ್ರರ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸ್ಫೋಟ: ಮತ್ತೆ 3ಉಗ್ರರ ಸೆರೆ
ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಶಂಕಿತ ಉಗ್ರರನ್ನು ಸೆರೆ ಹಿಡಿದಿರುವುದಾಗಿ ದೆಹಲಿ ವಿಶೇಷ ಪೊಲೀಸ್ ದಳ ತಿಳಿಸಿದೆ.

ದಕ್ಷಿಣ ದೆಹಲಿ ಜಾಮಿಯಾ ನಗರದಲ್ಲಿ ಶುಕ್ರವಾರ ಬಹುಮಹಡಿ ಕಟ್ಟಡದಲ್ಲಿ ಅಡಗಿದ್ದ ಉಗ್ರರಲ್ಲಿ ಇಬ್ಬರು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ, ಇಬ್ಬರು ಪರಾರಿಯಾಗಿದ್ದರು. ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ.

ಏತನ್ಮಧ್ಯೆ ಭಾನುವಾರ ಬೆಳಿಗ್ಗೆ ಶಂಕಿತ ಉಗ್ರರಾದ ಜಿಯಾ ಖಾನ್, ಶಕೀಲ್ ಮತ್ತು ಶಾಕಿರ್‌‌‌ನನ್ನು ಬಂಧಿಸಿರುವುದಾಗಿ ದಕ್ಷಿಣ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ರೆಹಮಾನ್ ಎಂಬಾತನನ್ನು ಜಾಮಿಯಾ ಎನ್‌ಕೌಂಟರ್ ಸಂದರ್ಭದಲ್ಲಿ ಬಂಧಿಸಲಾಗಿತ್ತು,

ಬಂಧಿತ ಮೂರು ಉಗ್ರರು ಉತ್ತರಪ್ರದೇಶ, ದೆಹಲಿ, ಅಹಮದಾಬಾದ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ. ಅಲ್ಲದೇ ಅವರಿಂದ ಹಲವು ನಕಲಿ ದಾಖಲಿ ಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ದಕ್ಷಿಣ ದೆಹಲಿ ಜಿಲ್ಲಾ ಪೊಲೀಸ್ ಮತ್ತು ಸ್ಸೆಶಲ್ ಸೆಲ್ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟ ಪ್ರಕರಣದ ಶಂಕಿತ ಉಗ್ರರಾದ ಸೈಫ್ ಮತ್ತು ಜೇಶನ್ ಇಬ್ಬರನ್ನು ಶನಿವಾರ ಬಂಧಿಸಲಾಗಿದ್ದು, ಅವರನ್ನು 14ದಿನಗಳ ಕಾಲ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದ್ದು, ತೀವ್ರ ವಿಚಾರಣೆಯ ಬಳಿಕ ಈ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮತ್ತಷ್ಟು
ದೆಹಲಿ ಸ್ಫೋಟ-ಸೈಫ್ ತಪ್ಪೊಪ್ಪಿಗೆ
ದೆಹಲಿ ಸ್ಫೋಟಕ್ಕೆ ಕರ್ನಾಟಕದಿಂದ ಸ್ಫೋಟಕ !
ಅಸ್ಸಾಂ: ಅನಿಲಸೋರಿಕೆಯಿಂದ ತೈಲಗಳ್ಳರ ಸಾವು
ದೆಹಲಿ ಸ್ಫೋಟ ಶಂಕಿತರು ಪೊಲೀಸರ ವಶಕ್ಕೆ
ಕೆಚ್ಚೆದೆಯ ಅಧಿಕಾರಿಗೆ ರಾಷ್ಟ್ರದ ನಮನ
ವೇತನ ವಿಳಂಬವಾದರೆ ಬಡ್ಡಿ ಸಮೇತ ನೀಡಬೇಕು