ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್‌ಗೂ ಉಗ್ರರಿಂದ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‌ಎಫ್) ಅನ್ನು ನಿಯೋಜಿಸಲಾಗಿರುವುದಾಗಿ ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ 17ನೇ ಶತಮಾನದ ದೇಶದ ಖ್ಯಾತ ಪ್ರವಾಸಿ ತಾಣವಾದ ತಾಜ್ ಮಹಲ್‌ನ ಮುಖ್ಯ ದ್ವಾರದ ಹೆಚ್ಚುವರಿ ಸಿಐಎಸ್ಎಫ್ ಜವಾನರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಯೋತ್ಪಾದಕರ ದಾಳಿಯ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಹಿರಿಯ ಅಧಿಕಾರಿ ಶನಿವಾರ ತಾಜ್‌ಮಹಲ್ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಚೀನ ವಸ್ತುಶಾಸ್ತ್ರ ಸರ್ವೇಕ್ಷಣಾ ಇಲಾಖೆ ಮತ್ತು ಸಿಐಎಸ್‌ಎಫ್, ಪೊಲೀಸ್ ಜಂಟಿ ಸಮಿತಿ ಜೊತೆ ಸೇರಿ ತಾಜ್‌ಮಹಲ್‌ಗೆ ಹೆಚ್ಚಿನ ಭದ್ರತೆ ನೀಡುವ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದೆ.
|