ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಫೋಟ ವಿಚಾರಣೆ: ಶಂಕಿತ ಉಗ್ರ ಸೈಫ್ ಉಡುಪಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟ ವಿಚಾರಣೆ: ಶಂಕಿತ ಉಗ್ರ ಸೈಫ್ ಉಡುಪಿಗೆ
ದೆಹಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ಹೆಚ್ಚಿನ ತನಿಖೆಗೆ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರ ಮೊಹಮ್ಮದ್ ಸೈಫ್‌‌ನನ್ನು ಉಡುಪಿಯ ಜಿಲ್ಲೆಯ ಮಣಿಪಾಲಕ್ಕೆ ಕರೆ ತಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿನ ಬಾಟ್ಲಾ ಬಹುಮಹಡಿಯಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಎನ್‌ಕೌಂಟರ್ ಮೂಲಕ ಸದೆಬಡಿದ ನಂತರ,ಸೈಫ್‌ನನ್ನು ಸೆರೆ ಹಿಡಿಯಲಾಗಿತ್ತು.

ರಾಜಧಾನಿಯಲ್ಲಿ ನಡೆಸಿದ ಸರಣಿ ಸ್ಫೋಟಕ್ಕಾಗಿ ಕರ್ನಾಟಕದಿಂದ ಸ್ಫೋಟಕವನ್ನು ತಂದಿರುವುದಾಗಿ ಸೈಫ್ ವಿಚಾರಣೆ ವೇಳೆ ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯ ಕೊನ್ನಾಟ್ ಸ್ಥಳದಲ್ಲಿ ಸೈಫ್ ಬಾಂಬ್ ಅನ್ನು ಇಟ್ಟಿರುವುದಾಗಿ ತನಿಖೆ ಸಂದರ್ಭ ಒಪ್ಪಿಕೊಂಡಿದ್ದಾನೆ.ಅಲ್ಲದೇ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಸರಣಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಸಿಂಗೂರ್:ಭೂಮಿ ಮರಳಿಸಲು 7ದಿನ ಗಡುವು-ಬ್ಯಾನರ್ಜಿ
ದೆಹಲಿ ಸ್ಫೋಟ: ಮಣಿಪಾಲಕ್ಕೆ ತನಿಖಾ ತಂಡ
ದೆಹಲಿ: 20 ಕಡೆ ಸ್ಫೋಟಕ್ಕೆ ಉಗ್ರರ ಸಂಚು
ತಾಜ್‌ಮಹಲ್‌ಗೆ ಬೆದರಿಕೆ: ಬಿಗಿ ಭದ್ರತೆ
ದೆಹಲಿ ಸ್ಫೋಟ: ಮತ್ತೆ 3ಉಗ್ರರ ಸೆರೆ
ದೆಹಲಿ ಸ್ಫೋಟ-ಸೈಫ್ ತಪ್ಪೊಪ್ಪಿಗೆ