ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯಡಿಯೂರಪ್ಪ ವಿರುದ್ಧ ಆರ್ಚ್‌‌ಬಿಶಪ್ ಕೆಂಡಾಮಂಡಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪ ವಿರುದ್ಧ ಆರ್ಚ್‌‌ಬಿಶಪ್ ಕೆಂಡಾಮಂಡಲ
ಕರ್ನಾಟಕದಲ್ಲಿ ಪ್ರಾರ್ಥನಾ ಮಂದಿರ ಮತ್ತು ಚರ್ಚ್‌ಗಳ ಮೇಲೆ ನಡೆದಿರುವ ದಾಳಿ ಕುರಿತು ಬೆಂಗಳೂರಿನ ಕ್ರೈಸ್ತ್ ಧರ್ಮಗುರು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚರ್ಚ್‌ಗಳ ಮೇಲೆ ನಡೆದಿರುವ ದಾಳಿಯಿಂದಾಗಿ ತಮಗೆ ತುಂಬಾ ನೋವಾಗಿರುವುದಾಗಿ ಆಕ್ರೋಶಿರಾಗಿ ನುಡಿದ ಅವರು, ಈ ಘಟನೆಯಿಂದ ಕ್ರೈಸ್ತ ಸಮುದಾಯ ನೋವನ್ನನುಭಸಿರುವುದಾಗಿ ಹೇಳಿದರು.

ಅಲ್ಲದೇ ರಾಜ್ಯಾದ್ಯಂತ ಕ್ರೈಸ್ತ ಸಮುದಾಯದ ಮೇಲೆ, ಪ್ರಾರ್ಥನಾ ಮಂದಿರ,ಚರ್ಚ್‌ಗಳ ಮೇಲೆ ದಾಳಿ ನಡೆದಂತೆ ಒಂದೇ ಒಂದು ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದರೆ ನೀವು ಸುಮ್ಮನಿರುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಿಜಕ್ಕೂ ಈ ಘಟನೆಯಿಂದ ತಮಗೆ ತುಂಬಾ ನೋವಾಗಿರುವುದಾಗಿ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ ಎಂದು ತಮ್ಮ ಅಳಲನ್ನು ಯಡಿಯೂರಪ್ಪ ಅವರ ಮುಂದೆ ತೋಡಿಕೊಂಡರು.

ಮಂಗಳೂರು, ಉಡುಪಿಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಎರಡು ಚರ್ಚ್‌ಗಳ ಮೇಲೆ ಹಿಂದೂ ಗುಂಪೊಂದು ದಾಳಿ ನಡೆಸಿತ್ತು.ಅದರಂತೆ ಕೊಡಗು ಜಿಲ್ಲೆಯ ಚರ್ಚ್‌ವೊಂದರ ಮೇಲೂ ದಾಳಿ ನಡೆದಿತ್ತು.

ಈ ಘಟನೆಯ ಬಳಿಕ ಕ್ರೈಸ್ತ್ ಧರ್ಮಗುರು ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು,ಕ್ರೈಸ್ತ ಸಮುದಾಯದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡರು.
ಮತ್ತಷ್ಟು
ಸ್ಫೋಟ ವಿಚಾರಣೆ: ಶಂಕಿತ ಉಗ್ರ ಸೈಫ್ ಉಡುಪಿಗೆ
ಸಿಂಗೂರ್:ಭೂಮಿ ಮರಳಿಸಲು 7ದಿನ ಗಡುವು-ಬ್ಯಾನರ್ಜಿ
ದೆಹಲಿ ಸ್ಫೋಟ: ಮಣಿಪಾಲಕ್ಕೆ ತನಿಖಾ ತಂಡ
ದೆಹಲಿ: 20 ಕಡೆ ಸ್ಫೋಟಕ್ಕೆ ಉಗ್ರರ ಸಂಚು
ತಾಜ್‌ಮಹಲ್‌ಗೆ ಬೆದರಿಕೆ: ಬಿಗಿ ಭದ್ರತೆ
ದೆಹಲಿ ಸ್ಫೋಟ: ಮತ್ತೆ 3ಉಗ್ರರ ಸೆರೆ