ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಜರಂಗದಳ ನಿಷೇಧಕ್ಕೆ ಅಲ್ಪಸಂಖ್ಯಾತ ಆಯೋಗ ಶಿಫಾರಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಜರಂಗದಳ ನಿಷೇಧಕ್ಕೆ ಅಲ್ಪಸಂಖ್ಯಾತ ಆಯೋಗ ಶಿಫಾರಸು
ಕರ್ನಾಟಕ ಮತ್ತು ಒರಿಸ್ಸಾಗಳಲ್ಲಿನ ಚರ್ಚ್‌ಗಳ ಮೇಲಿನ ದಾಳಿಯಲ್ಲಿ ಸಂಘಪರಿವಾರದ ಭಜರಂಗದಳ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ (ನ್ಯಾಷನಲ್ ಕಮಿಷನ್ ಆಫ್ ಮೈನಾರಿಟಿಸ್) ಶಿಫಾರಸು ಮಾಡಿದೆ.

ಇತ್ತೀಚೆಗೆ ದೇಶಾದ್ಯಂತ ಕ್ರೈಸ್ತ ಸಮುದಾಯ ಮತ್ತು ಚರ್ಚ್‌ಗಳ ಮೇಲೆ ಭಜರಂಗದಳ ದಾಳಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಪಸಂಖ್ಯಾತ ಆಯೋಗ ಭಜರಂಗದಳದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಕುರಿತು ಒಮ್ಮತದ ನಿರ್ಧಾರಕ್ಕೆ ಮುಂದಾಗಿದ್ದು, ಆ ನಿಟ್ಟಿನಲ್ಲಿ ಭಜರಂಗದಳ ನಿಷೇಧಿಸುವ ಕುರಿತು ಮುಂದಡಿ ಇಟ್ಟಿದೆ.

ಭಜರಂಗದಳ ನಿಷೇಧ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ಆಯೋಗದ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ.

ಏತನ್ಮಧ್ಯೆ ನೀವು ಸಿಮಿಯನ್ನು ನಿಷೇಧಿಸುತ್ತೀರಿ,ಅದಕ್ಕೆ ಭಜರಂಗದಳವನ್ನು ಯಾಕೆ ನಿಷೇಧಿಸಬಾರದು ಎಂದು ಆಯೋಗ ಪ್ರಶ್ನಿಸಿದೆ.

ಇಷ್ಟೆಲ್ಲಾ ಘಟನೆಗಳಾಗುತ್ತಿದ್ದರೂ ಕೂಡ ಕರ್ನಾಟಕದಲ್ಲಿ ಇನ್ನೂ ಕ್ರೈಸ್ತ ಸಮುದಾಯ ಮತ್ತು ಚರ್ಚ್‌ಗಳ ಮೇಲೆ ದಾಳಿ ಮುಂದುವರಿದೆ,ಅಂದರೆ ರಾಜ್ಯ ಸರ್ಕಾರ ಈ ದಾಳಿಯನ್ನು ತಡೆಗಟ್ಟಲು ಸಮರ್ಥವಾಗಿಲ್ಲ ಮತ್ತು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅರ್ಥ ಎಂಬುದಾಗಿ ಆಯೋಗದ ಉಪಾಧ್ಯಕ್ಷ ಮೈಕಲ್ ಪಿ.ಪಿಂಟೋ ತಿಳಿಸಿದ್ದಾರೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸತ್ಯಶೋಧನಾ ಸಮಿತಿ ಈಗಾಗಲೇ ಕರ್ನಾಟಕದಲ್ಲಿ ದಾಳಿಗೊಳಗಾದ ಮಂಗಳೂರು, ಉಡುಪಿ, ಬೆಂಗಳೂರಿಗೆ ಕಳೆದ ವಾರ ಭೇಟಿ ಪರಿಶೀಲನೆ ನಡೆಸಲಾಗಿದ್ದು, ವರದಿಯನ್ನು ಅಂತಿಮಗೊಳಿಸಿ ಕೂಡಲೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗುವುದು ಎಂದು ಹೇಳಿದರು.

ಅಲ್ಲದೇ ದಾಳಿಯ ಸಂದರ್ಭದಲ್ಲಿ ಪೊಲೀಸರು ಕೂಡ ಕಿಡಿಗೇಡಿಗಳೊಂದಿಗೆ ಸೇರಿ ಕ್ರೈಸ್ತ್ ಮಹಿಳೆಯರ ಮೇಲೆ ಅಮಾನುಷವಾಗಿ ವರ್ತಿಸಿರುವುದಾಗಿ ಆಯೋಗ ಗಂಭೀರವಾಗಿ ಆರೋಪಿಸಿದೆ. ಮಂಗಳೂರಿನ ಸೈಂಟ್ ಜೋಸೆಫ್ ಪ್ರಾರ್ಥನಾ ಮಂದಿರದೊಳಗಿದ್ದ ಕ್ರೈಸ್ತ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿರುವುದನ್ನು ಸತ್ಯಶೋಧನಾ ಸಂದರ್ಭದಲ್ಲಿ ಕಂಡುಕೊಂಡಿರುವುದಾಗಿ ಹೇಳಿದೆ.
ಮತ್ತಷ್ಟು
ಒರಿಸ್ಸಾಕ್ಕೆ ಶಿವರಾಜ್ ಪಾಟೀಲ್ ಭೇಟಿ
ಯುಎನ್‌ಒ ಅಧಿವೇಶನದಲ್ಲಿ ಪ್ರಧಾನಿ ಭಾಷಣ
ನೋಯ್ಡಾ: ನೌಕರರ ಆಕ್ರೋಶಕ್ಕೆ ಸಿಇಒ ಬಲಿ
ಎಲ್‌ಒಸಿ: ಇಬ್ಬರು ಪಾಕ್ ಉಗ್ರರ ಹತ್ಯೆ
ಯಡಿಯೂರಪ್ಪ ವಿರುದ್ಧ ಆರ್ಚ್‌‌ಬಿಶಪ್ ಕೆಂಡಾಮಂಡಲ
ಸ್ಫೋಟ ವಿಚಾರಣೆ: ಶಂಕಿತ ಉಗ್ರ ಸೈಫ್ ಉಡುಪಿಗೆ