ದಲಿತ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತ್ವರಿತಗತಿ ನ್ಯಾಯಾಲಯ ನಾಲ್ಕು ಮಂದಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದ್ದು, ಉಳಿದ 11ಮಂದಿ ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಲ್ಲಿನ ತ್ವರಿತಗತಿ ನ್ಯಾಯಾಲಯದ ಸೆಶನ್ಸ್ ನ್ಯಾಯಾಧೀಶರಾದ ಅನೂಪ್ ಕುಮಾರ್ ಗೋಯಲ್ ಅವರು ಮಂಗಳವಾರದಂದು 15 ವರ್ಷಗಳ ಹಿಂದಿನ ಬಾರಾಬಂಕಿ ದಲಿತರ ಹತ್ಯಾಕಾಂಡ ಪ್ರಕರಣದ ನಾಲ್ಕು ಆರೋಪಿತರಿಗೆ ಮರಣದಂಡನೆ ತೀರ್ಪು ನೀಡಿದರೆ, ಉಳಿದ 11 ದೋಷಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ದಲಿತ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಾದ ಸಾಗರ್,ನಾನ್‌ಕು,ಹರಿನಾಥ್ ಮತ್ತು ಅಶೋಕ್‌ಗೆ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ.
ಉತ್ತರಪ್ರದೇಶದ ಬಾರಾಬಂಕಿ ದಲಿತ ಹತ್ಯಾಕಾಂಡ ಪ್ರಕರಣ ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಕಳೆದ 15 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ಆರೋಪಿತರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
|