ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ
ಪೂರ್ವ ಮತ್ತು ಉತ್ತರಭಾರತದಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ 49ಜನರು ಸಾವನ್ನಪ್ಪಿದ್ದು, ಮಂಗಳವಾರದಂದು ನೂರಾರು ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರವಾಹದಿಂದಾಗಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 163ಕ್ಕೆ ಏರಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವುದಾಗಿ ನೂತನ ವರದಿಯ ಅಂಕಿ-ಅಂಶ ಹೇಳಿದೆ.

ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರದ ರಾಜ್ಯವಾದ ಉತ್ತರಪ್ರದೇಶದಲ್ಲಿಯೇ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ ಅಧಿಕವಾಗಿದೆ.

ಮನೆ ಕುಸಿತ, ಪ್ರವಾಹದಿಂದಾಗಿಯೇ ಸೋಮವಾರದವರೆಗೆ ಒಟ್ಟು 32ಮಂದಿ ಸಾವನ್ನಪ್ಪಿದ್ದರು. ರಾಜ್ಯದ ಹೆಚ್ಚಿನ ನದಿಗಳು ಪ್ರವಾಹದಿಂದ ತುಂಬಿ ಹರಿಯುತ್ತಿದೆ ಎಂದು ರಾಜ್ಯ ಪರಿಹಾರ ವರಿಷ್ಠಾಧಿಕಾರಿ ಜಿಕೆ ಟಂಡನ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ರಾಜ್ಯದಲ್ಲಿ 70ಮಂದಿ ಬಲಿಯಾಗಿದ್ದರು, ಪ್ರವಾಹದಿಂದಾಗಿ ಎರಡು ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ ಎಂದು ಅವರು ವಿವರಣೆ ನೀಡಿದರು.

ಪ್ರವಾಹದಿಂದ ತತ್ತರಿಸಿರುವ ಜನರಿಗಾಗಿ ರಾಜ್ಯ ಸರ್ಕಾರ 2 ಸಾವಿರಕ್ಕೂ ಅಧಿಕ ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡಿರುವುದಾಗಿ ಹೇಳಿದೆ.

ಅಲ್ಲದೇ ಪೂರ್ವರಾಜ್ಯವಾದ ಒರಿಸ್ಸಾದಲ್ಲೂ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೇರಿದೆ ಎಂದು ಮುಖ್ಯಕಾರ್ಯದರ್ಯದರ್ಶಿ ಅಜಿತ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

ರಾಜ್ಯದ ಸುಮಾರು 285,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು,ರಾಜ್ಯ ಸರ್ಕಾರದಿಂದ 261ತಾತ್ಕಾಲಿಕ ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತ್ತಷ್ಟು
ದಲಿತ್ ಹತ್ಯಾಕಾಂಡ: 4 ಆರೋಪಿತರಿಗೆ ಗಲ್ಲು
ಉತ್ತರಪ್ರದೇಶ:ದೆಹಲಿ ಪೊಲೀಸರ ತೀವ್ರ ಶೋಧ
ಭಜರಂಗದಳ ನಿಷೇಧಕ್ಕೆ ಅಲ್ಪಸಂಖ್ಯಾತ ಆಯೋಗ ಶಿಫಾರಸು
ಒರಿಸ್ಸಾಕ್ಕೆ ಶಿವರಾಜ್ ಪಾಟೀಲ್ ಭೇಟಿ
ಯುಎನ್‌ಒ ಅಧಿವೇಶನದಲ್ಲಿ ಪ್ರಧಾನಿ ಭಾಷಣ
ನೋಯ್ಡಾ: ನೌಕರರ ಆಕ್ರೋಶಕ್ಕೆ ಸಿಇಒ ಬಲಿ