ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ
ಕೋಲ್ಕತಾದ ಹೌರಾ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರದಂದು ಸ್ಫೋಟಕ ತುಂಬಿದ್ದ ಬ್ಯಾಗ್‌ವೊಂದನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಖಾಸಗಿ ಟಿವಿಯೊಂದರ ವರದಿಯೊಂದು ತಿಳಿಸಿದೆ.

ಹೌರಾ ರೈಲ್ವೆ ನಿಲ್ದಾಣದ ಪ್ಲ್ಯಾಟ್‌ಫಾರಂ 21ರಲ್ಲಿ ನಿಂತಿದ್ದ ಭದ್ರಕ್ ಪ್ರಯಾಣಿಕರ ರೈಲಿನಲ್ಲಿ ಈ ಬ್ಯಾಗ್ ಪತ್ತೆಯಾಗಿದ್ದು, ಇದರಲ್ಲಿ ಜೀವಂತ ಗ್ರೆನೇಡ್ ಇದ್ದಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಸ್ಫೋಟಕ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ರೈಲ್ವೆ ಪೊಲೀಸರು ನಿಲ್ದಾಣದ ಸುತ್ತುವರಿದಿದ್ದು,ಬಾಂಬ್ ನಿಷ್ಕ್ರಿಯ ದಳ ಆಗಮಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪ್ಲ್ಯಾಟ್ ಫಾರಂ 21ರಲ್ಲಿ ನಿಂತಿದ್ದ ರೈಲಿನಲ್ಲಿ ಅನಾಮಿಕ ಬ್ಯಾಗ್‌ವೊಂದು ಇದ್ದಿರುವುದಾಗಿ ಪೊಲೀಸರಿಗೆ ಬಂದ ದೂರವಾಣಿ ಕರೆಯ ನಂತರ,ಈ ಅಂಶ ಬಹಿರಂಗಗೊಂಡಿದೆ.
ಮತ್ತಷ್ಟು
ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ
ದಲಿತ್ ಹತ್ಯಾಕಾಂಡ: 4 ಆರೋಪಿತರಿಗೆ ಗಲ್ಲು
ಉತ್ತರಪ್ರದೇಶ:ದೆಹಲಿ ಪೊಲೀಸರ ತೀವ್ರ ಶೋಧ
ಭಜರಂಗದಳ ನಿಷೇಧಕ್ಕೆ ಅಲ್ಪಸಂಖ್ಯಾತ ಆಯೋಗ ಶಿಫಾರಸು
ಒರಿಸ್ಸಾಕ್ಕೆ ಶಿವರಾಜ್ ಪಾಟೀಲ್ ಭೇಟಿ
ಯುಎನ್‌ಒ ಅಧಿವೇಶನದಲ್ಲಿ ಪ್ರಧಾನಿ ಭಾಷಣ