ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ
ಉತ್ತರಪ್ರದೇಶ ಗ್ರೇಟರ್ ನೋಯ್ಡಾದ ಸಿಇಒ ಎಲ್.ಕೆ.ಚೌಧರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು 136ಮಂದಿಯನ್ನು ಬಂಧಿಸಲಾಗಿದೆ.

ಗ್ರೇಟರ್ ನೋಯ್ಡಾದಲ್ಲಿನ ಇಲೆಕ್ಟ್ರಾನಿಕ್ ಬಿಡಿಭಾಗಗಳ ಕಂಪೆನಿಯೊಂದರ ವಜಾಗೊಂಡ ನೌಕರರು ಮತ್ತು ಆಡಳಿತ ಮಂಡಳಿ ವಿರುದ್ಧ ನಡೆದ ಘರ್ಷಣೆಯಲ್ಲಿ, ಪ್ರತಿಭಟನಾಕಾರರು ಕಂಪೆನಿಯ ಸಿಇಒನನ್ನೇ ಸೋಮವಾರ ಹೊಡೆದು ಕೊಂದಿದ್ದರು.

ಈ ಘಟನೆಯಲ್ಲಿ ಕಲ್ಲು ತೂರಾಟದಿಂದಾಗಿ ಸುಮಾರು 37ಮಂದಿ ಗಾಯಗೊಂಡಿದ್ದರು.

ವಜಾಗೊಂಡ ಪ್ರತಿಭಟನಾ ನಿರತ ನೌಕರರು ಸಿಇಒ ಅವರನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ನೋಯ್ಡಾದ ಜನರನ್ನು ಬೆಚ್ಚಿಬೀಳಿಸಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾದ ನೌಕರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ
ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ
ದಲಿತ್ ಹತ್ಯಾಕಾಂಡ: 4 ಆರೋಪಿತರಿಗೆ ಗಲ್ಲು
ಉತ್ತರಪ್ರದೇಶ:ದೆಹಲಿ ಪೊಲೀಸರ ತೀವ್ರ ಶೋಧ
ಭಜರಂಗದಳ ನಿಷೇಧಕ್ಕೆ ಅಲ್ಪಸಂಖ್ಯಾತ ಆಯೋಗ ಶಿಫಾರಸು
ಒರಿಸ್ಸಾಕ್ಕೆ ಶಿವರಾಜ್ ಪಾಟೀಲ್ ಭೇಟಿ