ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ನವದೆಹಲಿ:ಕರ್ನಾಟಕದಾದ್ಯಂತ ಹೊತ್ತಿಉರಿದ ಕೋಮುದಳ್ಳುರಿ ತಣ್ಣಗಾಗುತ್ತಿದ್ದಂತೆಯೇ, ಇದೀಗ ಮತ್ತೆ ಒರಿಸ್ಸಾದ ಕಂಧಮಲ್‌ನಲ್ಲಿ ಬುಧವಾರ ಮತ್ತೆ ಹಿಂಸಾಚಾರ ಮರುಕಳಿಸಿದ್ದು,ಓರ್ವ ಆದಿವಾಸಿ ಸಾವವನ್ನಪ್ಪಿರುವ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಇಲ್ಲಿನ ರಾಲ್ಕಿಯಾ ಪ್ರದೇಶದಲ್ಲಿ ನಡೆದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಓರ್ವ ಆದಿವಾಸಿ ಸಾವನ್ನಪ್ಪಿದ್ದು,25ಮಂದಿ ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕೋಮುಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಆದಿವಾಸಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸುಮಾರು 500 ಮಂದಿ ಮಹಿಳೆಯರ ದಂಡೊಂದು ರಾಲ್ಕಿಯಾ ಪೊಲೀಸ್ ಠಾಣೆಗೆ ದಾಳಿ ನಡೆಸಿದ್ದರು.

ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವ ಘರ್ಷಣೆ ಏರ್ಪಟ್ಟಿದ್ದು,ಪರಿಸ್ಥಿತಿ ಕೈಮೀರಿ ಹೋದಾಗ ಗೋಲಿಬಾರ್ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಾಮಾದೇವ್ ಪ್ರಧಾನ್ ಎಂಬಾತ ಗುಂಡೇಟಿನಿಂದ ಸಾವನ್ನಪ್ಪಿದ್ದು,ಆತನನ್ನು ಬೆಹ್ರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತಾದರು ಆತ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಹೆಚ್ಚುವರಿ ಪೊಲೀಸರು ಆಗಮಿಸದಂತೆ ಬುಡಕಟ್ಟು ಜನಾಂಗ ರಾಲ್ಕಿಯಾ ಪ್ರದೇಶದಲ್ಲಿ ರಸ್ತೆ ತಡೆ ನಿರ್ಮಿಸಿದ್ದು,ದಾರಿಯುದ್ದಕ್ಕೂ ಮರಗಳನ್ನು ಕಡಿದು ಅಡ್ಡಗಟ್ಟಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ದೆಹಲಿ ಸ್ಫೋಟದ ಉಗ್ರರಿಗೆ ದುಬೈ ನಂಟು
ಸ್ಫೋಟ:ಉಗ್ರ ಅತಿಫ್ ಖಾತೆಯಲ್ಲಿ 3ಕೋಟಿ !
ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ
ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ
ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ
ದಲಿತ್ ಹತ್ಯಾಕಾಂಡ: 4 ಆರೋಪಿತರಿಗೆ ಗಲ್ಲು